LOCAL NEWS : ಕೊಪ್ಪಳ ನಗರ ಸಭೆಯ ದಿವ್ಯ ನಿರ್ಲಕ್ಷ್ಯ : ಈ ಕಾಲೋನಿಯಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆ..!!

You are currently viewing LOCAL NEWS : ಕೊಪ್ಪಳ ನಗರ ಸಭೆಯ ದಿವ್ಯ ನಿರ್ಲಕ್ಷ್ಯ : ಈ ಕಾಲೋನಿಯಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆ..!!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಕೊಪ್ಪಳ ನಗರ ಸಭೆಯ ದಿವ್ಯ ನಿರ್ಲಕ್ಷ್ಯ  : ಈ ಕಾಲೋನಿಯಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆ..!!

ಕೊಪ್ಪಳ : ನಗರದ ದೇವರಾಜ್ ಅರಸ್ ಕಾಲೋನಿಯಲ್ಲಿ ಸುಮಾರು ದಿನಗಳಿಂದ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೊಗಿವೆ. ಸಮಸ್ಯೆಯನ್ನು ಗಂಭೀರವಾಗಿ ತಗೆದುಕೊಂಡು ಕ್ರಮವಹಿಸಬೇಕಿದ್ದ ನಗರಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.

ಈ ನಗರದ ರಸ್ತೆ ಮಧ್ಯೆ ಗಟರದ ಕೆಲವು ಕಲ್ಲುಗಳನ್ನು ತೆಗೆದಿದ್ದಾರೆ ಅದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಾಗ ಭಯದಿಂದ ಓಡಾಡುವ ವಾತಾವರಣ ನಿರ್ಮಾಣವಾಗಿದೆ.

ಗಟಾರಗಳು ತುಂಬಿ ತುಳುಕುತ್ತಿರುವದರಿಂದ ಪ್ರತಿ ದಿನ ಸಾಯಂಕಾಲ ಆಯ್ತು ಎಂದರೆ ಸೊಳ್ಳೆಯ ಆರ್ಭಟ ಶುರುವಾಗುತ್ತದೆ ಅದರಿಂದ ಜನರಿಗೆ ಪ್ರಾಣ ಸಂಕಟವಾಗಿ ಕಾಡುತ್ತದೆ ಹಾಗೂ ರಾತ್ರಿ ಅಪ್ಪಿ ತಪ್ಪಿ ವಿದ್ಯುತ್ ಅಸ್ವಸ್ಥಗೊಂಡರೆ ಗಟರದಲ್ಲಿ ಬಿದ್ದವರು ಯಾರೆಂದು ಗುರುತಿಸಲು ಸಹ ಆಗದಂತ ಪರಿಸ್ಥಿತಿಯಾಗಿದೆ ಇದರ ಬಗ್ಗೆ ಗಮನ ಹರಿಸಬೇಕಿದ್ದ ನಗರ ಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೊಡಿಕೊಂಡಿದ್ದಾರೆ.

Leave a Reply

error: Content is protected !!