ALERT : ಆಗಸ್ಟ್ ತಿಂಗಳಿನಿಂದ ಅಕ್ಕಿ ಹಾಗೂ ಹಣ ಕೂಡ ಸಿಗುವುದಿಲ್ಲ..!! ಯಾಕೆ ಗೊತ್ತ..?

You are currently viewing ALERT : ಆಗಸ್ಟ್ ತಿಂಗಳಿನಿಂದ ಅಕ್ಕಿ ಹಾಗೂ ಹಣ ಕೂಡ ಸಿಗುವುದಿಲ್ಲ..!! ಯಾಕೆ ಗೊತ್ತ..?

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ “ಅನ್ನಭಾಗ್ಯ ಯೋಜನೆ”ಯಡಿಯಲ್ಲಿ ಸುಮಾರು 05 ಕೆಜಿ ಅಕ್ಕಿ ಜತೆಗೆ 05 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ ದರ ನಿಗದಿಪಡಿಸಿ, ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ 170 ರೂ. ಹಣವನ್ನು ಡಿಬಿಟಿ ಮೂಲಕ ನೇರವಾಗಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಈಗಾಗಲೇ ಈ ಯೋಜನೆಗೆ ಚಾಲನೆ ನೀಡಿದ್ದು, ಹೀಗಾಗಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದು ಅಲ್ಲದೇ ಈಗಾಗಲೇ ಕೆಲವರಿಗೆ ಈ ಯೋಜನೆಗೆ ಹಣ ಕೂಡ ಸಂದಾಯವಾಗಿದೆ.

ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿಎಚ್‌ಎಚ್) ಪ್ರತಿ ಅರ್ಹ ಫಲಾನುಭವಿಗೆ “ರಾಷ್ಟೀಯ ಆಹಾರ ಭದ್ರತಾ ಕಾಯ್ದೆ”ಯನ್ವಯ ವಿತರಿಸಲಾಗುವ 5 ಕೆಜಿ ಆಹಾರಧಾನ್ಯಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ಐದು ಕೆಜಿ ಆಹಾರ ಧಾನ್ಯ ಸೇರಿಸಿ ಪ್ರತಿ ಮಾಹೆ ಪ್ರತಿ ಫಲಾನುಭವಿಗೆ 10 ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿರ್ಧರಿಸಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ಬಂದಿದೆ.

*ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಿಶೇಷ ಸೂಚನೆ ಇಲ್ಲಿದೆ*

➤ ಆಧಾರ್ ಕಾರ್ಡ್‌ ಲಿಂಕ್ ಆಗದೇ ಇರುವ ಸಕ್ರೀಯ ಬ್ಯಾಂಕ್‌ಖಾತೆ ಇಲ್ಲದೇ ಇರುವ ಹಾಗೂ ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಫಲಾನುಭವಿಗಳು ಕಳೆದ ಜುಲೈ20ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ.

➤ ಎಎವೈ ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಕಡುಬಡವರೆಂದು ಹೇಳಿ ಸರ್ಕಾರ ಈಗಾಗಲೇ 21 ಕೆಜಿ ಅಕ್ಕಿಯನ್ನು ಹಾಗೂ 14 ಕೆಜಿ ಜೋಳವನ್ನು ಉಚಿತವಾಗಿ ನೀಡುತ್ತಿದೆ. ಮೂರು ಜನಕ್ಕಿಂತ ಹೆಚ್ಚು ಮಂದಿ ಇದ್ದರೆ ಮಾತ್ರ ಒಬ್ಬರಿಗೆ 170 ರೂ. ಹಣ ಸಿಗುತ್ತದೆ. 3 ಕ್ಕಿಂತ ಎಷ್ಟೇ ಮಂದಿ ಇದ್ದರೂ ಪ್ರತಿಯೊಬ್ಬರಿಗೂ 170 ರೂ. ನಗದು ಸೌಲಭ್ಯ ಸಿಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

➤ ಈ ಯೋಜನೆಯಲ್ಲಿ ಇ-ಕೆವೈಸಿಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

➤ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರಿಗೆ ಹಣ ಜಮೆಯಾಗದೆ ಇರುವುದಕ್ಕೆ ಮುಖ್ಯಸ್ಥರು ನಿಷ್ಕ್ರಿಯ ಬ್ಯಾಂಕ್ ಖಾತೆ ಹೊಂದಿರುವುದು ಅಥವಾ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ (ಇ-ಕೆವೈಸಿ) ಮಾಡದಿರುವುದು. ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದದೆ ಇರುವುದು, ಅಮಾನ್ಯವಾದ ಆಧಾ‌ರ್‌ ಸಂಖ್ಯೆ ನೀಡಿದ್ದು ಕಾರಣವಾಗಿರುತ್ತದೆ.

➤ ಅರ್ಹ ಪಡಿತರ ಚೀಟಿದಾರರು DBT ಮೂಲಕ ನೇರವಾಗಿ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳಿಗೆ #https://ahara.kar.nic.in/status2/status_of_dbt.aspx ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

ವರದಿ : ಚಂದ್ರು ಆರ್‌ ಭಾನಾಪೂರ್‌

Leave a Reply

error: Content is protected !!