ಯಲಬುರ್ಗಾ : “ತಾಲೂಕಿನ ಅಧಿಕಾರಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಶಾಸಕರ ಅಸಹಾಯಕತೆ ಎದ್ದು ಕಾಣುತ್ತಿದೆ” ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ ಮಾಡಿದ್ದಾರೆ.
SPECIAL POST : ಸಮಸ್ತ ನಾಡಿನ ಜನತೆಗೆ “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಶುಭಾಶಯಗಳು
ಇಂದು ಯಲಬುರ್ಗಾದ ಬಿಜೆಪಿ ಕಾರ್ಯಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಚಾರ್, “ಈ ಕ್ಷೇತ್ರದ ಶಾಸಕರು ಯಾವುದೇ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ, ಹಾಗಾಗಿ ಕ್ಷೇತ್ರದ ಅಭಿವೃದ್ಧಿಗೆ ಕುಂಟಿತವಾಗಿದೆ. ರೈತರ ಸಮಸ್ಯೆ ಕೇಳುತ್ತಿಲ್ಲ, ನೀರಾವರಿ ಬಗ್ಗೆ ಮಾತನಾಡುತ್ತಿಲ್ಲ, ಈ ವರ್ಷ ಬರಗಾಲ ಬಂದರು ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಿಲ್ಲ. ಯಲಬುರ್ಗಾ ಶಾಸಕರು ಏನ್ ಮಾಡ್ತಿದ್ದಾರೆ. ಇವರು ಧಾರವಾಡನಲ್ಲಿನ ತಮ್ಮ ಫಾರ್ಮ್ ಹೌಸ್ ನಲ್ಲಿ ರೆಸ್ಟ್ ಮಾಡುತ್ತಿದ್ದಾರೆ ಅನಿಸುತ್ತೆ. ಈ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದು ರಾಜ್ಯದ ಅಭಿವೃದ್ಧಿಗೆ ಕೊಳ್ಳಿ ಇಡುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
BREAKING : ಇಂದು ದಿಡೀರನೇ ಪತ್ರಿಕಾಗೋಷ್ಠಿ ಕರೆದ ಮಾಜಿ ಸಚಿವ ಹಾಲಪ್ಪ ಆಚಾರ್..!
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಈರಣ್ಣ ಹುಬ್ಬಳ್ಳಿ, ವಿಶ್ವನಾಥ್ ಮರಿಬಸಪ್ಪನವರು, ಶರಣಪ್ಪ ಬಣ್ಣದಬಾವಿ, ಮಾರುತಿ ಗಾವರಾಳ, ಶಂಭು ಜೋಳದ, ಅಯ್ಯನಗೌಡ ಕೆಂಬಣ್ಣನವರ್, ಅಮರೇಶ ಹುಬ್ಬಳ್ಳಿ, ಸಿ.ಎಲ್. ಪೊಲೀಸ್ ಪಾಟೀಲ್, ಶಿವಕುಮಾರ್ ನಾಗಲಾಪುರಮಠ, ಶರಣಪ್ಪ ಈಳಿಗೆರ್, ಸುಧಾಕರ್ ದೇಸಾಯಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.