LOCAL EXPRESS : ಸೆ.08 ರಂದು ಯಲಬುರ್ಗಾ ಪಟ್ಟಣದಲ್ಲಿ ಸರ್ಕಾರ ವಿರುದ್ದ ಪ್ರತಿಭಟನೆ ಮಾಜಿ ಸಚಿವ ಹಾಲಪ್ಪ ಆಚಾರ್

You are currently viewing LOCAL EXPRESS : ಸೆ.08 ರಂದು ಯಲಬುರ್ಗಾ ಪಟ್ಟಣದಲ್ಲಿ ಸರ್ಕಾರ ವಿರುದ್ದ ಪ್ರತಿಭಟನೆ ಮಾಜಿ ಸಚಿವ ಹಾಲಪ್ಪ ಆಚಾರ್

ಯಲಬುರ್ಗಾ : ಸೆಪ್ಟೆಂಬರ್ 08 (ಶುಕ್ರವಾರ) ಕಾಂಗ್ರೆಸ್ ಸರ್ಕಾರ ವಿರುದ್ದ ಹಾಗೂ ರಾಜ್ಯದಲ್ಲಿ ಬರ ಘೋಷಣೆ ಮಾಡುವಂತೆ ಒತ್ತಾಯಿಸಿ ಯಲಬುರ್ಗಾ ಪಟ್ಟಣದಲ್ಲಿ ಪ್ರತಿಭನೆ ನೆಡೆಸಲಾಗುವುದು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಯಲಬುರ್ಗಾ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ನೆಡೆಸದೆ ಕೇವಲ ಗ್ಯಾರಂಟಿ ಯೋಜನೆ ಹಿಂದೆ ಬಿದ್ದಿದೆ.ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜನರು ಬರಗಾಲ ಪರಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಕೇವಲ ಅಧ್ಯಯನದ ನೆವ ಹೇಳಿ ಕಾಲಹರಣ ಮಾಡುತ್ತಿದ್ದೆ.

LOCAL EXPRESS : ಅಸಹಾಯಕ ಶಾಸಕ ರಾಯರೆಡ್ಡಿ : ಮಾಜಿ ಸಚಿವ ಹಾಲಪ್ಪ ವ್ಯಂಗ್ಯ.!!

ಗ್ಯಾರಂಟಿ ಯೋಜನೆಗಳಿಗೆ ವಿವಿಧ ಸಮುದಾಯಗಳ ಅನುಧಾನವನ್ನು ಬಳಕೆ ಮಾಡಿಕೊಂಡು ಸಮುದಾಯಗಳ ಬಡ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನೆಡೆಯುತ್ತಿದ್ದ ಎಲ್ಲಾ ಕಾಮಗಾರಿಗಳನ್ನು ತಡೆದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೆ ಗುತ್ತಿಗೆದಾರರು ಪರದಾಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ, ಆದರೂ ಸಹಿತ ಕಾಂಗ್ರೆಸ್ ಸರ್ಕಾರ ಅದ್ಯಾವುದನ್ನು ತಲೆಕೆಡಿಸಿಕೊಳ್ಳದೆ ಕೇವಲ ಗ್ಯಾರಂಟಿ ಯೋಜನೆಯನ್ನು ಅರೆ ಬರೆಯಾಗಿ ಜಾರಿ ಮಾಡಿ ರಾಜ್ಯದ ಜನತೆ ಅಲೆದಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಇತಂಹ ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡು ಸೆ.೮ ರಂದು ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಕಛೇರಿಯಿಂದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಹಾದು ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.

SPECIAL POST : ಸಮಸ್ತ ನಾಡಿನ ಜನತೆಗೆ “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಶುಭಾಶಯಗಳು

ಈ ಪ್ರತಿಭಟನಾ ರ‍್ಯಾಲಿಯಲ್ಲಿ ತಾಲೂಕಿನ ಎಲ್ಲಾ ಬಿಜೆಪಿಯ ತಾಲೂಕ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

SPECIAL POST : ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಜನುಮದಿನದ ಶುಭಾಶಯ

ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರಾದ ಯಲಬುರ್ಗಾ ಭಾಜಪಾ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಈರಣ್ಣ ಹುಬ್ಬಳ್ಳಿ, ಶರಣಪ್ಪ ಬಣ್ಣದಭಾವಿ, ಶುಂಭ ಜೋಳದ, ಸುಧಾಕರ ದೇಸಾಯಿ, ಪಟ್ಟಣ ಪಂಚಾಯತ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ, ಶಿವಕುಮಾರ ನಾಗಲಾಪೂರಮಠ, ಸಿ.ಎಚ್.ಪೋಲಿಸ್‌ಪಾಟೀಲ, ಶರಣಪ್ಪ ಈಳಗೇರ, ಮಾರುತಿ ಗಾವರಾಳ ಹಾಗೂ ಅನೇಕ ಬಿಜೆಪಿಯ ಕಾರ್ಯಕರ್ತರು ಹಾಜರಿದ್ದರು.

Leave a Reply

error: Content is protected !!