LOCAL EXPRESS : ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವಭಾವಿ ಸಭೆ

You are currently viewing LOCAL EXPRESS : ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವಭಾವಿ ಸಭೆ

ಕುಕನೂರು : ಇದೆ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿಯ ಸರಳವಾಗಿ ವೇದಿಕೆ ಕಾರ್ಯಕ್ರಮ ಇರಲಿದೆ ಎಂದು ಗ್ರೇಡ್-2 ತಹಸೀಲ್ದಾರ್ ಮುರಳೀಧರ ಕಲಕರ್ಣಿ ಹೇಳಿದರು.

ಇಂದು ತಹಸೀಲ್ದಾರ್ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವಭಾವಿ ನಡೆದಿದ್ದು, ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರತಿ ವರ್ಷದಂತೆ ಈ ವರ್ಷವೂ ಹೈದರಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಬದಲಾಗಿ ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಮಾಡಲಾಗುತ್ತಿದೆ. ಹಾಗಾಗಿ ಈ ಕಾರ್ಯಕ್ರಮದ ಸಲುವಾಗಿ ಪೂರ್ವ ಸಿದ್ಧತೆಯನ್ನು ಎಲ್ಲಾ ಇಲಾಖೆಯವರು ಮಾಡಿಕೋಳ್ಳಬೇಕು, ಸೆಪ್ಟೆಂಬರ್ 17 ರಂದು ಬೆಳಗ್ಗೆ 9:00 ಗಂಟೆಗೆ ಧ್ವಜರೋಣ ಇದ್ದು, ಇದಕ್ಕೂ ಮೊದಲು ವಿಶ್ವ ಕರ್ಮ ಜಯಂತಿಯನ್ನು ಬೆಳಗ್ಗೆ 8:30ಕ್ಕೆ ಪೂಜಾ ಕಾರ್ಯ ಇರಲಿದೆ ಬಳಿಕ ವೇದಿಕೆ ಕಾರ್ಯಕ್ರಮ ಇರಲಿದೆ” ಎಂದು ಹೇಳಿದರು.

*ವಿಶ್ವಕರ್ಮ ಜಯಂತಿಯ ಆಚರಣೆ ಕುರಿತು ಸಮಾಜದ ಮುಖಂಡರು ಅಸಮಾಧಾನ*

ಸಮಾಜ ಹಿರಿಯ ಮುಖಂಡ ಮಾನಪ್ಪ ಪತ್ತಾರ್ ನಿವೃತ್ತಿ ಅಧಿಕಾರಿ ಮಾತನಾಡಿ, “ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ವಿಶ್ವ ಕರ್ಮ ಜಯಂತಿ ಈ ಎರಡು ಕಾರ್ಯಕ್ರಮಗಳು ಒಟ್ಟಿಗೆ ಬಂದಿದ್ದು, ಕಾರ್ಯಕ್ರಮ ಆಯೋಜನೆಗೆ ಅಡಚಣೆ ಉಂಟಾಗಲಿದೆ. ಹಾಗಾಗಿ ತಾವುಗಳು ನಮ್ಮ ಸಮಾಜದ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಮ್ಮಿಕೊಳ್ಳಲಿದ್ದೇವೆ. ಮಾನ್ಯ ತಹಸೀಲ್ದಾರರು ಆಹ್ವಾನಿಸಲಿದ್ದೇವೆ. ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಸರ್ಕಾರದ ಅನುಧಾನದಲ್ಲಿ ಬರಿಸಲು ಮನವಿ ಮಾಡುತ್ತಿದ್ದೇವೆ” ಎಂದರು.


“ಈ ಹಿಂದೆ 2 ಬಾರಿ ವಿಶ್ವಕರ್ಮ ಹಾಗೂ ಜಕಣಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಸಮಾಜ ಹಾಗೂ ತಾಲೂಕಾ ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು, ಆದ್ರೆ ಇಲ್ಲಿವರಿಗಾದರೂ ಹಣ ಬಿಡುಗಡೆ ಮಾಡಿಲ್ಲ. ಈ ಕಾರ್ಯಕ್ರಮಕ್ಕೆ ನಮ್ಮ ದೇವಸ್ಥಾನದ ದೇಣಿಗೆ ಹಣವನ್ನು ಹಾಕಿ ಕಾರ್ಯಕ್ರಮ ಮಾಡಿದ್ದೇವೆ. ಆದಷ್ಟು ಬೇಗ ಸರ್ಕಾರದಿಂದ ಹಣ ಬಿಡುಗಡೆಗೊಳಿಸಿ, ಇಷ್ಟು ತಡವಾಗಿಡಕ್ಕೆ ನಿಮ್ಮ ನಿರ್ಲಕ್ಷವೇ ಕಾರಣ” ಎಂದು ಸಮಾಜದ ಮುಖಂಡ ದೇವೇಂದ್ರಪ್ಪ ಬಡಿಗೇರ ಹೇಳಿದರು.

JOB ALERT : ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ಈ ಬಳಿಕ ಮಾತನಾಡಿದ ಗ್ರೇಡ್ 2 ತಹಸೀಲ್ದಾರ್,”ನಿಮ್ಮ ಬಿಲ್ ಪಾವತಿಯನ್ನು ಸದ್ಯದಲ್ಲೇ ಮಾಡಲಾಗುವುದು ಮತ್ತು ಮುಂದೆ ಈ ರೀತಿ ಸಮಸ್ಯೆ ಆಗದಂತೆ ನೋಡುಕೊಳ್ಳಲಿದ್ದೇವೆ. ಅಂದು ತಾವು ಎಲ್ಲರು ಬಂದು ಕಾರ್ಯಕ್ರಮ ಯಶಸ್ವಿಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಇದೆ ವೇಳೆಯಲ್ಲಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ದ್ವಜಾರೋಹಣ ಮಾಡಬೇಕು ಹಾಗೂ ವಿಶ್ವ ಕರ್ಮ ಜಯಂತಿ ಆಚರಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಶೋಕ್ ಪತ್ತಾರ್, ಸುರೇಶ ಪತ್ತಾರ್, ಅಮರೇಶ್ ಪತ್ತಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ವಿಶ್ವಕರ್ಮ ಸಮಾಜ ಮುಖಂಡರು ಮತ್ತು ತಹಸೀಲ್ದಾರ್ ಕಚೇರಿ ಸಿಬ್ಬಂದಿಗಳು ಇದ್ದರು.

Leave a Reply

error: Content is protected !!