LOCAL EXPRESS : ಶಾಂತಿ ಎಲ್ಲಿರುತ್ತೋ ಅಲ್ಲಿ ಸಮೃದ್ಧಿ : ಡಿ.ವೈ.ಎಸ್.ಪಿ ಶರಣಬಸಪ್ಪ ಸುಭೆದಾರ್

You are currently viewing LOCAL EXPRESS : ಶಾಂತಿ ಎಲ್ಲಿರುತ್ತೋ ಅಲ್ಲಿ ಸಮೃದ್ಧಿ : ಡಿ.ವೈ.ಎಸ್.ಪಿ ಶರಣಬಸಪ್ಪ ಸುಭೆದಾರ್

ಕುಕನೂರು : ಇದೆ ತಿಂಗಳ ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿಯ ಆಚರಣೆ ಹಾಗೂ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕುಕನೂರ ಪೊಲೀಸ್ ಠಾಣೆಯಲ್ಲಿ ಇಂದು ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮೌನೇಶ್ ಪಾಟೀಲ್, “ಕುಕನೂರು-ಯಲಬುರ್ಗಾ ನಗರಗಳು ಸೌಹಾರ್ದ ನಗರಗಳು ಎಂದು ಪ್ರಸಿದ್ದಿ ಪಡೆದುಕೊಂದಿದೆ. ಹಾಗಾಗಿ ಎಲ್ಲರೂ ಶಾಂತಿಯಿಂದ ನಿಮ್ಮ ಹಬ್ಬಗಳನ್ನು ಆಚರಣೆ ಮಾಡಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಈದ್ ಮಿಲಾದ್ ಹಾಗೂ ಗಣೇಶ ಜೊತೆ ಆಚರಣೆ ಮಾಡಿ” ಎಂದರು.

LOCAL EXPRESS : ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವಭಾವಿ ಸಭೆ

ಈ ಸಭೆ ಅಧ್ಯಕ್ಷತೆ ವಹಿಸಿದ ಡಿವೈಎಸ್ ಪಿ ಶರಣಬಸಪ್ಪ ಸುಭೆದಾರ್ ಮಾತನಾಡಿ, “ವ್ಯಯಕ್ತಿಕ ಹೇಗೆತನ ಬೇಡ, ಶಾಂತಿ ಸೌಹಾರ್ದತೆಯಿಂದ ಈ ಹಬ್ಬಗಳನ್ನ ಆಚರಣೆ ಮಾಡಬೇಕು ಶಾಂತಿ ಎಲ್ಲಿರುತ್ತೋ ಅಲ್ಲಿ ಸಮೃದ್ಧಿ ಹೆಚ್ಚಾಗಿರುತ್ತೆ. ಈ ಹಬ್ಬಗಳಲ್ಲಿ ಯುವಕರು ತುಂಬಾ ಜಾಗೃತೆಯಿಂದ ಭಾಗವಹಿಸಬೇಕು. ಯಾವುದೇ ಯಾವುದೇ ತಂಟೆ ತಕರಾರು ಜಗಳಗಳಲ್ಲಿ ಭಾಗವಹಿಸಿದರೆ, ನಿಮ್ಮ ಮುಂದಿನ ಭವಿಷ್ಯಕ್ಕೆ ಅದು ಮಾರಕವಾಗಿರುತ್ತದೆ. ಒಂದು ವೇಳೆ ಜಗಳ ಜಗಳಗಳಲ್ಲಿ ಭಾಗಿಯಾದರೆ ನಿಮ್ಮ ಮೇಲೆ ಪೊಲೀಸ್ ಕೇಸ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ” ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

ಕುಕನೂರು ಠಾಣೆಯ ಪಿಎಸ್ಐ ಟಿ. ಗುರುರಾಜ್ ಮಾತನಾಡಿ, “ಗೌರಿ ಗಣೇಶ ಮಂಡಳಿಯವರಿಗೆ ಪೊಲೀಸ್ ಠಾಣೆ ಸೂಚನೆಗಳನ್ನು ಹೇಳಿದರು.

JOB, walk-in interview : ಸೆ.08ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ..!!

* ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳ ಯಾವುದೇ ವಿವಾದಿತ ಸ್ಥಳವಾಗಿರದಂತೆ ನೋಡಿಕೊಳ್ಳಲು, ಸದರಿ ಜಾಗೆಯ ಮಾಲೀಕರಿಂದ ಮಂಡಳಿಯವರು ಮೂರ್ತಿ ಪ್ರತಿಷ್ಠಾಪನೆಗೆ ಆಧ್ಯಂತರ ವರದಿ ಪಡೆಯುವುದು.

* ನಿರ್ಮಿಸುವ ಚೌಕಟ್ಟು/ಶಾಮಿಯಾನ ಸುಗಮ ಸಂಚಾರಕ್ಕೆ ಅಡೆತಡೆಯಾಗದಂತೆ ನೋಡಿಕೊಳ್ಳಲು ಹಾಗೂ ಗಟ್ಟಿಮುಟ್ಟಾಗಿರುವ ರೀತಿಯಲ್ಲಿ ನಿರ್ಮಿಸಲು ಕ್ರಮವಹಿಸುವುದು.

* ಗೌರಿ ಗಣೇಶ ಮಂಡಳಿಯವರು ಮೂರ್ತಿ ಪ್ರತಿಷ್ಠಾಪನೆಗೊಂಡು ವಿಸರ್ಜನೆಗೊಳ್ಳುವವರೆಗೆ ದಿನದ 24 ಗಂಟೆ ಹಾಳೆ ಪ್ರಕಾರ ಪ್ರತಿ ದಿನ 20 ಜನ ಸ್ವಯಂ ಸೇವಕರನ್ನು ನಿಯೋಜನೆ ಮಾಡಲು ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸ್ಥಳದಲ್ಲಿ ಇರುವಂತೆ

* ಗೌರಿ ಗಣೇಶ ಮಂಡಳಿಯವರಿಗೆ ವಿಶೇಷವಾಗಿ ನಗರದ ಪ್ರದೇಶದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿಷ್ಠಾಪನೆ ಮಾಡಲಿರುವ ವಿಗ್ರಹಗಳ ಪಂಡಾಲಿನಲ್ಲಿ ಸಿಸಿಟಿವಿ ಅಳವಹಿಸಲು ಕ್ರಮವಹಿಸುವುದು,

* ಗೌರಿ ಗಣೇಶ ಮಂಡಳಿಯವರಿಗೆ ಪೆಂಡಾಲಿಗೆ ಹೊಂದಿಕೊಂಡು ಯಾವುದೇ ತರಹದ ಆಗಿ ಪ್ರವಹಿಸುವ ವಸ್ತಗಳನ್ನು ಪಡೆದಂತೆ ಹಾಗೂ ಕ್ರಮವಹಿಸುವುದು.

* ಆಡುಗೆ ತಯಾರಿಸುವುದು ಇನ್ನಿತರ ಕೆಲಸಗಳನ್ನು ಪೆಂಡಾಲಿನಿಂದ ದೂರದಲ್ಲಿ ನಡೆಸಲು ಯಾವುದೇ ತರಹದ ಆಗ್ನಿ ಅವಘಡಗಳು ನಡೆಯದಂತೆ ನೋಡಿಕೊಳ್ಳಲು ಸೂಕ್ತ ಸಲಕರಣೆಗಳನ್ನು ಇಟ್ಟುಕೊಳ್ಳಲು, ಈ ಕುಂತು ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವುದು,

* ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಅಳವಡಿಸಿಕೊಳ್ಳಲು ಹಾಗೂ ಕೆ.ಇ.ಬಿ ಇಲಾಖೆಯವರಿಂದ ಪರಿಶೀಲನೆಗೊಳಪಟ್ಟು ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವುದು, ಪೆಂಡಾಲ ಸುತ್ತಮುತ್ತ ಸೂಕ್ತ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಹಾಗೂ ವಿದ್ಯುತ್‌ ಅಡೆತಡೆಗೊಂಡ ಸಮಯದಲ್ಲಿ ತುರ್ತು ಸಮಯದಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದು.

* ಪೆಂಡಾಲಿನ ಒಳ ಪ್ರವೇಶಿಸಲು ಹಾಗೂ ಹೊರಗಡೆ ನಿರ್ಗಮಿಸಲು ಪ್ರತ್ಯೇಕವಾದ ಧಾರಗಳನ್ನು ನಿರ್ಮಿಸಲು ಹಾಗೂ ಜನಸಂಧಣಿ ನಿಯಂತ್ರಿಸಲು ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಿಕೊಳ್ಳುವುದು.

* ಗೌರಿ ಗಣೇಶ ಮಂಡಳಿಯವರು ಧ್ವನಿವರ್ಧಕಗಳನ್ನು ನಿಯಮಾವಳಿಗೆ ಒಳಪಟ್ಟು ಉಪಯೋಗಿಸಲು ಸೂಚಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಪರವಾನಿಗೆ ಪಡೆಯಲು ಕಟ್ಟುನಿಟ್ಟಾಗಿ ಸೂಚಿಸಿದೆ.

* ಮಖ್ಯವಾದ ಪೆಂಡಾಲುಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ಸೂಕ್ತ ಪೊಲೀಸ್‌ ಸಿಬ್ಬಂದಿಯವರನ್ನು ನಿಯೋಜನೆಗೊಳಸಿ ಸದರಿ ಸ್ಥಳದಲ್ಲಿ ಪಾಯಿಂಟ್ ಮಸ್ತಕ/ವಿಸಿಟಿಂಗ್ ಪುಸ್ತಕ ಅಳವಡಿಸಿ ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುವುದು.

* ಮುಖ್ಯವಾದ ಪೆಂಡಾಲುಗಳಿಗೆ ಬೀಟ್’ ಸಿಬ್ಬಂದಿ, ಪಿ.ಎಸ್.ಐ ಮತ್ತು ಪಿ.ಐ ರವರು ನಿಯಮಿತವಾಗಿ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಎಂಟಿಂಗ್ ಪುಸ್ತಕದಲ್ಲಿ ಪರಾ ನಮೂದು ಮಾಡಿ ಕಮವಹಿಸುವುದು.

* ಗೌರಿ ಗಣೇಶ ಮಂಡಳಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಪೂರ್ವದಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಪರವಾನಿಗೆ ಪಡೆಯುವುದು.

* ಸೂಚಿಸಿದ ಮಾರ್ಗ ಹೊರತುಪಡಿಸಿ ಅನ್ಯ ಮಾರ್ಗಗಳಲ್ಲಿ ಮೆರವಣಿಗೆ ಮಾಡದಂತೆ ಕ್ರಮವಹಿಸುವುದು.

* ಪರಿಸರ ಇಲಾಖೆ, ಜೆಸ್ಕಾಂ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್, ಆಗ್ನಿಶಾಮಕ ಇಲಾಖೆ, ಪೊಲೀಸ್‌ ಇಲಾಖೆಗಳಿಂದ ಕಡ್ಡಾಯವಾಗಿ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆದುಕೊಳ್ಳುವುದು.

* ನಗರ ಪಟ್ಟಣಗಳ ಮಾರ್ಗಗಳಲ್ಲಿ ವಿದ್ಯುತ್‌ ತಂತಿಗಳು ಕೆಲವಡೆಗಳಲ್ಲಿ ಕಳಮಟ್ಟದಲ್ಲಿರುವ ಕಾರಣ ಮೂರ್ತಿಯನ್ನು ಮೆರವಣಿಗೆಯಲ್ಲಿ ವಾಹನಗಳಲ್ಲಿ ಸಾಗಿಸುವ ಸಮಯದಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸಿ ಪ್ರಾಣ ಹಾನಿ ಘಟನೆ ತಪ್ಪಿಸಲು ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವದಲ್ಲಿ ಈ ಕುರಿತು ನಿಗಾವಹಿಸುವುದು.

* ಸಾರ್ವಜನಿಕರ ಸ್ವಾಸ್ಥ್ಯ ಹಾಗೂ ಆರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ನೋಡಿಕೊಳ್ಳುವುದು ಎಂದು ಪಿಎಸ್ಐ ಗುರುರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಸಿನಾಥ್ ಪಿಎಸ್ಐ ತನಿಖಾ ವಿಭಾಗ, ಅರೋಗ್ಯ ಅಧಿಕಾರಿ ಪ್ರಿಯಾಂಕಾ,ಅಗ್ನಿಶಾಮಕ ಅಧಿಕಾರಿ ಕೆ.ಜನಾರ್ಧನ್, ಪಟ್ಟಣ ಪಂಚಾಯತ್ ಸಿಬ್ಬಂದಿ ರಾಜೇಶ್ವರಿ, ಹಾಗೂ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಚಂದ್ರು ಆರ್.ಬಿ.

Leave a Reply

error: Content is protected !!