ಕೊಪ್ಪಳ : ಕೃಷಿ ಇಲಾಖೆಯಿಂದ 2023-24ನೇ ಸಾಲಿನ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ತಿಳಿಸಿದ್ದಾರೆ.
BREAKING : ಇಂದು ಮಾಜಿ ಸಚಿವ ಹಾಲಪ್ಪ ಆಚಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ..!!
ಕೃಷಿ ಪ್ರಶಸ್ತಿ ಕಾರ್ಯಕ್ರಮನ್ನು ಅನುಷ್ಠಾನಗೊಳಿಸಲು ಹಾಗೂ 2023ರ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಲು ಆಗಸ್ಟ್ 31ಕ್ಕೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಲು ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ.
LOCAL EXPRESS : ಶಾಂತಿ ಎಲ್ಲಿರುತ್ತೋ ಅಲ್ಲಿ ಸಮೃದ್ಧಿ : ಡಿ.ವೈ.ಎಸ್.ಪಿ ಶರಣಬಸಪ್ಪ ಸುಭೆದಾರ್
ರಾಜ್ಯ ಮಟ್ಟದ ಮುಂಗಾರಿನ ನೀರಾವರಿ ಮತ್ತು ಮಳೆಯಾಶ್ರಿತ ಭತ್ತ ಹಾಗೂ ಮಳೆಯಾಶ್ರಿತ ಬೆಳೆಗಳಾದ ಶೇಂಗಾ, ನವಣೆ, ಸಜ್ಜೆ, ಪೂರ್ಣ ಬೆಳೆಯ ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ಈ ಎಲ್ಲಾ ಬೆಳೆಗಳಿಗೆ ರೈತರು ಸ್ಪರ್ಧಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರನ್ನು ಈ ಕಾರ್ಯಕ್ರಮದಡಿ ನೋಂದಾಯಿಸಲು ಆದ್ಯತೆ ನೀಡಲಾಗಿದೆ.
JOB ALERT : ಗ್ರಂಥಾಲಯ, ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ..!
ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಎಲ್ಲಾ ಮಟ್ಟಗಳಿಗೂ (ರಾಜ್ಯ, ತಾಲೂಕು, ಜಿಲ್ಲಾ) ಅನ್ವಯಿಸುವಂತೆ ಸಾಮಾನ್ಯ ವರ್ಗದ ರೈತರಿಗೆ 100 ರೂ.ಗಳ ಪ್ರವೇಶ ಶುಲ್ಕ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 25 ರೂ.ಗಳ ಪ್ರವೇಶ ಶುಲ್ಕ ನಿಗದಿಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ಪಡೆಯಲು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇಯಿಂದ ಪಡೆಯಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.