BIG NEWS : ಅವಳಿ ತಾಲೂಕಿಗೆ 5 ಪ್ರೌಢಶಾಲೆ, 3 ಪದವಿಪೂರ್ವ ಕಾಲೇಜು ಮಂಜೂರು : ಶಾಸಕ ರಾಯರೆಡ್ಡಿ

You are currently viewing BIG NEWS : ಅವಳಿ ತಾಲೂಕಿಗೆ 5 ಪ್ರೌಢಶಾಲೆ, 3 ಪದವಿಪೂರ್ವ ಕಾಲೇಜು ಮಂಜೂರು : ಶಾಸಕ ರಾಯರೆಡ್ಡಿ

ಯಲಬುರ್ಗಾ : “2023-24ನೇ ಸಾಲಿನಲ್ಲಿ ಯಲಬುರ್ಗಾ-ಕುಕನೂರು ತಾಲೂಕುಗಳಿಗೆ ನೂತನವಾಗಿ 05 ಸರ್ಕಾರಿ ಪ್ರೌಢಶಾಲೆಗಳು, ಮತ್ತು 03 ಪದವಿಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿ ಆದೇಶಿಸಲಾಗಿದೆ” ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

LOCAL EXPRESS : “ಬರಪೀಡಿತ ತಾಲೂಕು” ಎಂದು ಘೋಷಣೆ ಮಾಡುವುದಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ : ಶಾಸಕ ರಾಯರೆಡ್ಡಿ!!

ಇಂದು ಯಲಬುರ್ಗಾ ಪಟ್ಟಣದ ಕಂದಾಯ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಶಿಕ್ಷಕರು-ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. ಒಟ್ಟು ಈ 5 ಪ್ರೌಢ ಶಾಲೆಗಳು ಅಕ್ಟೋಬರ್‌ 2ರಂದು (ಗಾಂಧಿ ಜಯಂತಿ ಎಂದೇ) ಆರಂಭವಾಗುವ ಸಾಧ್ಯತೆ ಇವೆ.

LOCAL NEWS : ಈ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ : ಮಾಜಿ ಸಚಿವ ಹಾಲಪ್ಪ ಆಚಾರ್‌ ಕಿಡಿ..!!

KOPPAL NEWS : ವಿಕಲಚೇತನರಿಗೆ ವಿವಿಧ ಯೋಜನೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ..!!

ಅವಳಿ ತಾಲೂಕಿನ ಪ್ರೌಢ ಶಾಲೆಗಳು ಇಂತಿವೆ. 1. ಹಿರೇವಡ್ರಕಲ್‌, 2.ಲಿಂಗನಬಂಡಿ, 3.ಮುದೋಳ, 4.ಯಡಿಯಾಪೂರ, 5. ಮಂಗಳೂರು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳು 1. ಗುನ್ನಾಳ 2.ಕುದರಿಮೋತಿ 3.ಮಸಬಹಂಚಿನಾಳ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ವೇತನವನ್ನು 03 ವರ್ಷಗಳವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿಧಿಯಿಂದ ಪಾವತಿಸಲಿದೆ. ಒಂದು ಪ್ರೌಡ ಶಾಲೆಯ ಶಿಕ್ಷಕರಿಗೆ ಒಂದು ವರ್ಷದಲ್ಲಿ 47 ಲಕ್ಷ ರೂಪಾಯಿ ವೇತನ ನೀಡಲಿದೆ. ಅದೇ ರೀತಿ ಒಂದು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಒಂದು ವರ್ಷಕ್ಕೆ 60 ಲಕ್ಷ ರೂಪಾಯಿ ವೇನತವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.

Leave a Reply

error: Content is protected !!