ಕುಕನೂರು : ಯಲಬುರ್ಗಾ-ಕುಕನೂರು ತಾಲೂಕಿನಾದ್ಯಂತ ಇತ್ತೀಚಗೆ ಬಂದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಅವರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸೆಪ್ಟಂಬರ್ 8 ರಂದು (ಶುಕ್ರವಾರ) ತೆರಳಿ, ವೀಕ್ಷಶಿಸಿದರು.
BREAKING : ಈ ಸಮುದಾಯದವರಿಗೆ 3 ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ..!!
BIG NEWS : ಅವಳಿ ತಾಲೂಕಿಗೆ 5 ಪ್ರೌಢಶಾಲೆ, 3 ಪದವಿಪೂರ್ವ ಕಾಲೇಜು ಮಂಜೂರು : ಶಾಸಕ ರಾಯರೆಡ್ಡಿ
ಭಾರೀ ಮಳೆಗೆ ಕುಕನೂರು ತಾಲೂಕಿನ ಇಟಗಿ-ಮನ್ನಾಪೂರ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಕಾರೊಂದು ರಸ್ತೆಯ ಪಕ್ಕದ ಗುಂಡಿಗೆ ಉರುಳಿ ಬಿದ್ದು ಜಖಂ ಗೊಂಡಿತ್ತು. ಮಳೆಯಿಂದ ಹಾನಿಗೊಳಗಾದ ರಸ್ತೆಯನ್ನು ಶಾಸಕ ರಾಯರೆಡ್ಡಿ ವೀಕ್ಷಿಸಿ, ಶೀಘ್ರವೇ ರಸ್ತೆಯನ್ನು ಮರು ನಿರ್ಮಾಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನ್ನಾಪೂರ, ಮಾಳೇಕೊಪ್ಪ, ಯರೇಹಂಚಿನಾಳ ಹಾಗೂ ಯಲಬುರ್ಗಾ ತಾಲೂಕಿನ ಇತರೆ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿನೀಡಿ, ವಾಸ್ತವ ಅಂಶಯನ್ನು ಪರಿಶೀಲಿಸಿದರು.
LOCAL NEWS : ಈ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ : ಮಾಜಿ ಸಚಿವ ಹಾಲಪ್ಪ ಆಚಾರ್ ಕಿಡಿ..!!
ಈ ವೇಳೆಯಲ್ಲಿ ಕುಕನೂರು ತಹಶೀಲ್ದಾರ್ ಹೆಚ್.ಪ್ರಾಣೇಶ, ಗ್ರೇಡ್-2 ತಹಸೀಲ್ದಾರ್ ಮುರುಳೀಧರ ರಾವ್ ಕುಲಕರ್ಣಿ, ಕುಕನೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಬಿರಾದಾರ, ಮುಖಂಡರಾದ ಯಂಕಣ್ಣ ಯರಾಸಿ, ಹನುಮಂತಗೌಡ ಚಂಡೂರು, ವಕ್ತಾರ ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಕುಕನೂರು ಪಿಎಸ್‌ಐ ಟಿ.ಗುರುರಾಜ ಹಾಗೂ ಅಲ್ಲಿನ ಗ್ರಾಮಸ್ಥರು ಇದ್ದರು.