LOCAL EXPRESS : ಶಾಸಕ ರಾಯರೆಡ್ಡಿ ಸ್ಥಳ ಪರಿಶೀಲನೆ : ಗೊಂದಲದ ಗೂಡಾದ ತಾಲೂಕು ಆಡಳಿತ ಕಟ್ಟಡ..!!

You are currently viewing LOCAL EXPRESS : ಶಾಸಕ ರಾಯರೆಡ್ಡಿ ಸ್ಥಳ ಪರಿಶೀಲನೆ : ಗೊಂದಲದ ಗೂಡಾದ ತಾಲೂಕು ಆಡಳಿತ ಕಟ್ಟಡ..!!

ಕುಕನೂರು : ಕೂಕನೂರಿನಲ್ಲಿ ನೂತನ ತಾಲೂಕು ಆಡಳಿತ ಕಚೇರಿಯ ಕಟ್ಟಡ ನಿರ್ಮಾಣಕ್ಕ ಶಾಸಕ ಬಸವರಾಜ ರಾಯರೆಡ್ಡಿ ಅವರು ಜಿಲ್ಲಾಧಿಕಾರಿ ನಳಿನ್ ಅತುಲ್ ಅವರೊಂದಿಗೆ ಇಂದು ಶನಿವಾರ ಗುದ್ನೇಶ್ವರ ಮಠದ ನವೋದಯ ಶಾಲೆಯ ಹಿಂದೆ ಇರುವ ಜಾಗವನ್ನು ಪರಿಶೀಲನೆ ಮಾಡಿದರು.

BIG NEWS : ಯುವಕ-ಯುವತಿಯರಿಗೆ ಭರ್ಜರಿ ಸಿಹಿ ಸುದ್ದಿ..!!

ಈ ವೇಳೆ ತಹಸೀಲ್ದಾರ್ ಕಚೇರಿ, ತಾಲೂಕು ಕೋರ್ಟ್ ಕಟ್ಟಡ, ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸುಮಾರು 30 ಎಕರೆ ಪ್ರದೇಶ ಇಲ್ಲಿ ಲಭ್ಯವಿದ್ದು, ಶಾಸಕ ರಾಯರಡ್ಡಿ ಅವರು ಇಲ್ಲಿಯೇ ಉದ್ದೇಶಿತ ಯೋಜನೆ ಅನುಷ್ಠಾನಗೊಳಿಸಲು ಮನಸ್ಸು ಮಾಡಿದ್ದು, ಇದಕ್ಕೆ ಗುದ್ನೇಶ್ವರ ಮಠದ ಗ್ರಾಮಸ್ಥರು ತೀವ್ರ ವಿರೋದ ವ್ಯಕ್ತಪಡಿಸಿದರು.

BREAKING : ಸರ್ಕಾರಿ ಕಟ್ಟಡಕ್ಕೆ ಸ್ಥಳ ವೀಕ್ಷಣೆಗೆ ಬಂದ ಶಾಸಕ ರಾಯರೆಡ್ಡಿಗೆ ಸ್ಥಳೀಯರಿಂದ ತೀವ್ರ ವಿರೋಧ…!!

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಶಾಸಕ ರಾಯರಡ್ಡಿ ಅವರು, ‘ನಾನು ಎಂ ಎಲ್ ಎ ಮಾತ್ರ ಸರ್ಕಾರ ಅಲ್ಲ, ಕಟ್ಟಡ ನಿರ್ಮಾಣ ಯಾವ ಸ್ಥಳದಲ್ಲಿ ಮಾಡಬೇಕು ಎಂಬುದನ್ನು ಕೊಪ್ಪಳ ಜಿಲ್ಲಾಧಿಕಾರಿಗಳು ನಿರ್ಣಯಿಸುತ್ತಾರೆ ಎಂದು ಹೇಳಿ ಅವರು ಜಾರಿಕೊಂಡರು.

ಜಿಲ್ಲೆಯಲ್ಲಿಯೇ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಗುದ್ನೇಶ್ವರ ಜಾತ್ರೆಯ ವೇಳೆಯಲ್ಲಿ ವಾಹನ ನಿಲುಗಡೆ, ಯಾತ್ರಾರ್ಥಿಗಳಿಗೆ ಸ್ಥಳದ ಅಭಾವ ಉಂಟಾಗುತ್ತದೆ, ಅಲ್ಲದೇ ಇದೊಂದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನ ಜಾಗವಾಗಿದ್ದು, ಈಗಾಗಲೇ 80 ಎಕರೆ ಭೂಮಿಯನ್ನು ನವೋದಯ ಶಾಲೆಗೆ ನೀಡಲಾಗಿದೆ. ಇಲ್ಲಿ ಹೊಸದಾಗಿ ಯಾವುದೇ ಸರ್ಕಾರಿ ಕಟ್ಟಡಗಳನ್ನು ಮಾಡಬಾರದು ಎಂದು ಗ್ರಾಮಸ್ಥರು ಇದಕ್ಕೆ ವಿರೋಧಿಸಿದರು.

KOPPAL NEWS : ನಾಳೆ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ

ನೂತನ ತಾಲೂಕು ಆಡಳಿತ ಕಚೇರಿ, ನ್ಯಾಯಾಲಯ, ಕ್ರೀಡಾಂಗಣ ನಿರ್ಮಾಣಕ್ಕೆ ಈಗ ಸದ್ಯ 30 ರಿಂದ 40 ಎಕರೆ ಭೂಮಿಯ ಅವಶ್ಯಕತೆ ಇದೆ, ಹಿಂದಿನ ಶಾಸಕ ಹಾಲಪ್ಪ ಆಚಾರ್ ಅವರ ಅವಧಿಯಲ್ಲಿ ಕೊಪ್ಪಳ ರಸ್ತೆಯ ಮಾರ್ಗದಲ್ಲಿ ಇದಕ್ಕಾಗಿ ಸುಮಾರು 10 ಎಕರೆ ಜಾಗವನ್ನು ಗುರಿತಿಸಲಾಗಿತ್ತು. ಆದರೆ, ಅದು ಇನ್ನೂ ಅಂತಿಮವಾಗಿರದ ಕಾರಣ ಹೊಸ ಜಾಗದ ಹುಡುಕಾಟದಲ್ಲಿ ಸ್ಥಳೀಯ ಆಡಳಿತ ಅಧಿಕಾರಿಗಳು, ಶಾಸಕರು ಮುಂದಾಗಿದ್ದಾರೆ.

ಕುಕನೂರು ಪಟ್ಟಣದ 19 ನೇ ವಾರ್ಡ್ ಗುದ್ನೇಶ್ವರ ಮಠದ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲು ಸೂಕ್ತ ಸ್ಥಳ ಎಂದು ಶಾಸಕ ರಾಯರಡ್ಡಿ ಅವರಿಗೆ ಅನಿಸಿದ್ದು, ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದಾರೆ ಇದು ಇಲ್ಲಿನ ಕೆಲ ಗ್ರಾಮಸ್ಥರು ಶಾಸಕ ರಾರೆಡ್ಡಿ ಅವರ ನಿರ್ಣಯಕ್ಕೆ ವಿರೋಧಿಸಿದರು.

Leave a Reply

error: Content is protected !!