LOCAL EXPRESS : ‘ಆಪರೇಷನ್ ಪೋಲೋ’ಯಿಂದ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ : ತಹಶೀಲ್ದಾರ್ ಎಚ್ ಪ್ರಾಣೇಶ್

You are currently viewing LOCAL EXPRESS : ‘ಆಪರೇಷನ್ ಪೋಲೋ’ಯಿಂದ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ  : ತಹಶೀಲ್ದಾರ್ ಎಚ್ ಪ್ರಾಣೇಶ್

ಕುಕನೂರು : “ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಚತುರತೆಯಿಂದ ‘ಆಪರೇಷನ್ ಪೋಲೋ’ ಹೈದರಾಬಾದ್ “ಪೊಲೀಸ್ ಆಕ್ಷನ್” ನ ಕೋಡ್ ನೇಮ್ ಆಗಿತ್ತು, ಇದು ಸೆಪ್ಟೆಂಬರ್ 1948 ರಲ್ಲಿ ಮಿಲಿಟರಿ ಕಾರ್ಯಾಚರಣೆಮಾಡಿ, ಭಾರತದ ಒಕ್ಕೂಟಕ್ಕೆ ಹೈದರಬಾದ್ ನಿಜಮಾರಿಂದ ಸೇರಿಸಿಕೊಳ್ಳಲಾಯಿತು” ಎಂದು ತಹಶೀಲ್ದಾರ್ ಹೆಚ್ ಪ್ರಾಣೇಶ್ ಹೇಳಿದರು.

SPECIAL POST : ಸಮಸ್ತ ನಾಡಿನ ಜನತೆಗೆ “ಕಲ್ಯಾಣ ಕರ್ನಾಟಕ ಉತ್ಸವ”ದ ಶುಭಾಶಯಗಳು 

ಇಂದು ತಶೀಲ್ದಾರ್ ಕಚೇರಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಮಾಡಲಾಯಿತು. ದ್ವಜಾರೋಹಣ ನೆರವೇರಿಸಿದ ತಶೀಲ್ದಾರ್ ಹೆಚ್ ಪ್ರಾಣೇಶ್ ಅವರು, “ಭಾರತದ ಸ್ವತಂತ್ರ ಆದ ನಂತರ ಒಂದು ವರ್ಷ ಬಳಿಕ ಆಗಿನ ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕಕ್ಕೆ ‘ರಕ್ತಸಿಕ್ತ’ಇತಿಹಾಸ ಇದೆ. ಇದರಿಂದ ಸ್ವಾತಂತ್ರ ದೊರೆತಿದೆ. ಈ ಭಾಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಪಡೆಸುವ ಸಲುವಾಗಿ 2013.. ರಲ್ಲಿ ಆರ್ಟಿಕಲ್ 371ಜೆ ತಂದು ವಿಶೇಷ ಸ್ಥಾನ ಮಾನವನ್ನು ನೀಡಲಾಗಿದೆ. ಆರ್ಟಿಕಲ್ 371ಜೆ ಬಂದು ಇಂದಿಗೆ ಹತ್ತು ವರ್ಷ ತುಂಬಿದೆ. ಈ ಕಾಲಂ ನ ಸದುಪಯೋಗ ಮಾಡಿಕೊಳ್ಳಬೇಕು” ಎಂದರು.

BREAKING : ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬೆಲೆಗೆ ಬಿದ್ದ ಪರವಾನಿಗೆ ಭೂಮಾಪಕ..!!

ಇದೇ ವೇಳೆಯಲ್ಲಿ ರವಿತೇಜ ಅಬ್ಬಿಗೇರಿ, ನಿವೃತ್ತ ಉಪನ್ಯಾಸಕರು, ವಿಶೇಷ ಉಪನ್ಯಾಸ ನೀಡಿದರು. ಶ್ರೀ ಗವಿಸಿದ್ದೇಶ್ವರ ಶಾಲೆಯ ಹಾಗೂ ಎಸ್. ಎಫ್ ಎಸ್ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LOCAL EXPRESS : ಶಾಸಕ ರಾಯರೆಡ್ಡಿ ಸ್ಥಳ ಪರಿಶೀಲನೆ : ಗೊಂದಲದ ಗೂಡಾದ ತಾಲೂಕು ಆಡಳಿತ ಕಟ್ಟಡ..!!

ಈ ಸಂಧರ್ಭದಲ್ಲಿ ಪಿ. ಸುಬ್ರಮಣ್ಯ ಮುಖ್ಯಧಿಕಾರಿ ಪಟ್ಟಣ ಪಂಚಾಯತ್ ಕುಕನೂರು, ವೆಂಕಟೇಶ್ ಒಂದಾಲ್ , ಸಹಾಯಕ ನಿರ್ದೇಶಕರು ತಾಲೂಕು ಪಂಚಾಯತ್ ಕುಕನೂರು, ಮುರಳೀಧರ ರಾವ್ ಕುಲಕರ್ಣಿ ಗ್ರೇಡ್ 2 ತಶೀಲ್ದಾರ್, ಸುರೇಶ ಮದಿನೂರು ಶಿಕ್ಷಣ ಇಲಾಖೆ ಅಧಿಕಾರಿ, ಅಶೋಕ ಪತ್ತಾರ ನಿವೃತ್ತ ಉಪನ್ಯಾಸಕರು, ಮಾನಪ್ಪ ಪತ್ತಾರ್ ಸಮಾಜದ ಮುಖಂಡರು, ವಿಶ್ವ ಕರ್ಮ ಸಮಾಜದ ಮುಖಂಡರು.

Leave a Reply

error: Content is protected !!