LOCAL EXPRESS : ವೀರ ಯೋದರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ : ಇ.ಸಿ.ಒ ಶರಣಪ್ಪ ರ‌್ಯಾವಣಕಿ

You are currently viewing LOCAL EXPRESS : ವೀರ ಯೋದರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ : ಇ.ಸಿ.ಒ ಶರಣಪ್ಪ  ರ‌್ಯಾವಣಕಿ

ಕುಕನೂರು: ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ 76 ನೇ ಕಲ್ಯಾಣ ಕರ್ನಾಟಕ ದಿನಾಚರಣೆ ಮತ್ತು ಭಗವಾನ್ ವಿರಾಟ್ ವಿಶ್ವಕರ್ಮ ಜಯಂತಿ ಯನ್ನು ಆಚರಿಸಲಾಯಿತು.

LOCAL EXPRESS : ‘ಆಪರೇಷನ್ ಪೋಲೋ’ಯಿಂದ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ : ತಹಶೀಲ್ದಾರ್ ಎಚ್ ಪ್ರಾಣೇಶ್ 

ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಕ ಎಸ್ ಹೆಚ್ ಗುಡ್ಲಾನೂರ ಮಾತನಾಡಿ, “ಸುಮಾರು 200 ವರ್ಷಗಳ ಕಾಲ ಬ್ರಿಟಿಷರು ಭಾರತ ದೇಶವನ್ನಾಳಿದರು ಇಡೀ ಭಾರತ ದೇಶ ಸ್ವತಂತ್ರದ ಸವಿಯನ್ನು ಅನುಭವಿಸುತ್ತಿದ್ದಾಗ ಈಭಾಗದ ಅಂದರೆ ಹೈದರಾಬಾದ್ ಕರ್ನಾಟಕ ದ 7 ಜಿಲ್ಲೆಗಳಿಗೆ ಒಂದು ವರ್ಷದ ನಂತರ ಸ್ವಾತಂತ್ರ್ಯ ಪಡೆದುಕೊಂಡೆವು, ಕಾರಣ ನಿಜಾಮನು ಭಾರತ ಒಕ್ಕೂಟದಲ್ಲಿ ಸೇರಲು ಇಚ್ಚಿಸಲಿಲ್ಲ. ಈ ಭಾಗ ಅತ್ಯಂತ ಹಿಂದುಳಿದ ಪ್ರದೇಶ ಸದಾ ಬರಗಾಲದ ಬವಣೆಯನ್ನು ಎದುರಿಸುತ್ತಿತ್ತು ನಿಜಾಮನ ಜೊತೆ ರಾಜರು ತಮ್ಮ ಮನಸೊ ಇಚ್ಚೆಯಂತೆ ಜನರನ್ನು ಹಿಂಸೆ ಕೊಡುತ್ತಾ ಮಕ್ಕಳೆನ್ನದೆ, ವೃದ್ದರೆನ್ನದೆ ತಮ್ಮ ಕೊಡಲಿ, ಕತ್ತಿಯಿಂದ ಹಿರಿದು ಕೊಲ್ಲುತ್ತಿದ್ದರು ಎಂದರು.

SPECIAL POST : ಸಮಸ್ತ ನಾಡಿನ ಜನತೆಗೆ “ಕಲ್ಯಾಣ ಕರ್ನಾಟಕ ಉತ್ಸವ”ದ ಶುಭಾಶಯಗಳು

ಇದೇ ವೇಳೆ ಮಾತನಾಡಿದ ಅವರು, “ವಿಶ್ವಕರ್ಮ ನಮ್ಮ ಪ್ರಾಚೀನ ಕಾಲದ ಎಂಜಿನೀಯರ್ ಆಗಿ ಬ್ರಹ್ಮಾಂಡವನ್ಮು ಸುಂದರ ಗೊಳಿಸುವದು ದೇವಾನುದೇವತೆಗಳ ಅರಮನೆ ,ನಗರ ನಿರ್ಮಾಣ ಕಾರ್ಯ ವನ್ನು ಮಾಡಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಯಲಬುಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇ.ಸಿ.ಒ ಶರಣಪ್ಪ ರಾವಣಕಿ ಅವರು ಮಾತನಾಡಿ, ‘ಕುಕನೂರು ತಾಲೂಕಿನ ಯರೇಹಂಚಿನಾಳದಲ್ಲಿ 12 ಜನ ವೀರ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದರಲ್ಲಿ ಲಕ್ಷ್ಮಪ್ಪ ಪೂಜಾರ ಎಂಬಾತನ್ನು ಕೈ ಕಾಲು ಕಟ್ಟಿ ನಾಲಗೆಗೆ ಮೊಳೆ ಹೊಡೆದು ಹಿಂಸೆ ಮಾಡಿದ್ದರು. ಅತ್ಯಂತ ಹೆಚ್ಚು ವೀರ ಯೋದರನ್ನು ಹೊಂದಿದ ಗ್ರಾಮ ಎಂಬುದನ್ನು ತಿಳಿಸಿದರು ಬ್ರಿಟಿಷರ ವಿರುದ್ಧ ಯಾವುದೇ ಘೋಷಣೆಯನ್ನು ಕೂಗುವಂತಿದ್ದಿಲ್ಲ. ಅವರೆಲ್ಲರನ್ನು ಇಂದು ಸ್ಮರಣೆ ಮಾಡಿಕೊಳ್ಳುವ ಸುದಿನವಾಗಿದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

LOCAL EXPRESS : ಶಾಸಕ ರಾಯರೆಡ್ಡಿ ಸ್ಥಳ ಪರಿಶೀಲನೆ : ಗೊಂದಲದ ಗೂಡಾದ ತಾಲೂಕು ಆಡಳಿತ ಕಟ್ಟಡ..!!

ಶಾಲಾ ಮುಖ್ಯೋಪಾಧ್ಯಾಯ ಎಸ್ ಜೆ ಪಾಟೀಲ್ ಅವರು ಮಾತನಾಡಿ, ‘ನಮ್ಮ ಕಲ್ಯಾಣ ಕರ್ನಾಟಕ ಭಾಗದವರು ಅತ್ಯಂತ ಹಿಂದುಳಿದವರು ಎಂಬುದು ಈಗ ಅದು ಕ್ರಮೇಣ ಕಡಿಮೆಯಾಗುತ್ತಿದೆ. 371 ಜೆ ಪ್ರಕಾರ ಇವತ್ತು ಎಲ್ಲಾ ಹುದ್ದೆಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಿ ಈ ಭಾಗದ ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ,ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಯಾಗುತ್ತಾ ಸಾಗಿದೆ ನಾವೆಲ್ಲರೂ ಧನ್ಯರು. ವಿದ್ಯಾರ್ಥಿಗಳು ಸತತ ಪ್ರಯತ್ನ ಮತ್ತು ಪರಿಶ್ರಮ ದಿಂದ ಎಲ್ಲರೂ ಶಿಕ್ಷಣವನ್ನು ಪಡೆಯಿರಿ ಎಂದು ತಿಳಿಸಿದರು.ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಬಿ.ಎಸ್. ಅರಳೆಲೆಮಠ. ಹಾಗೂ ಸರ್ವ ಶಿಕ್ಷಕ ವಿ ಬಿ ಕಟ್ಟಿ, ಬಿ ವಿ ಲಕ್ಷಾಣಿ, ವಿ ಆರ್ ಹಿರೇಮಠ. ಎಸ್‌ ಎಂ ಹಿರೇಮಠ, ಜಿ ಎಸ್ ಹೊಸಮನಿ, ಡಿ ಡಿ ಜೋಗಣ್ಣವರ , ಆರ್ ಡಿ ರಾಠೋಡ, ಶಿಕ್ಷಣ ಸಂಯೋಜಕ ಗವಿಸಿದ್ಧಪ್ಪ ಕರಮುಡಿ ಉಪಸ್ಥಿತಿಯಿದ್ದರು. ಕಾರ್ಯಕ್ರಮವನ್ನು ವಿ ಆರ್ ಹೀರೆಮಠ ನಿರೂಪಿಸಿದರು. ಎನ್ ಟಿ ಸಜ್ಜನ್ ವಂದನೆಗಳನ್ನು ಸಲ್ಲಿಸಿದರು.

Leave a Reply

error: Content is protected !!