ಕುಕನೂರು : ತಾಲೂಕಿನ ಗುದ್ನೇಶ್ವರ ಮಠದ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿ ತಹಸೀಲ್ದಾರ್ ಕಚೇರಿ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
BIG BREAKING : ಖ್ಯಾತ ನಟನ ಪುತ್ರಿ ಆತ್ಮಹತ್ಯೆ..!!
ಕುಕನೂರು ಪಟ್ಟಣದ 19 ನೇ ವಾರ್ಡ್ ನ ಗುದ್ನೇಶ್ವರ ಮಠದ ಸರ್ವೆ ನಂಬರ್ 78 ರಲ್ಲಿ 40 ಎಕರೆ ಜಮೀನು 18 ಮಂದಿ ದೇವಸ್ಥಾನದ ಸೇವಾದಾರರಿಗೆ ಮಿಸಾಲಿಡಲಾಗಿದೆ. ಇದರಲ್ಲಿ ಸ್ಥಳೀಯ ಶಾಸಕ ಬಸವರಾಜ ರಾಯರಡ್ಡಿ ಅವರು ತಹಸೀಲ್ದಾರ್ ಕಚೇರಿಸೇರಿದಂತೆ ಇತರ ಸರ್ಕಾರಿ ಕಟ್ಟಡ ಕಟ್ಟಲು ಮುಂದಾಗಿರುವುದಕ್ಕೆ ಸ್ಥಳೀಯ ನಿವಾಸಿಗಳು ವಿರೋಧಿಸಿದ್ದಾರೆ.
ಅಧಿಕಾರಿಗಳು v/s ಗುದ್ನೇಪ್ಪನ ಮಠದ ಜನರು..!!
ಈ ಕುರಿತಂತೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದಾರೆ. ಆದರೂ ಕೂಡಾ ಅಧಿಕಾರಿಗಳು ಗ್ರಾಮಸ್ಥರ ವಿರೋದದ ನಡುವೆ ತಹಶೀಲ್ದಾರ್ ನೇತೃತ್ವದಲ್ಲಿ ಇಂದು ಪ್ರಾಥಮಿಕ ವರದಿ ಕೊಡುವುದಕ್ಕಾಗಿ ಸರ್ವೆ ಕಾರ್ಯ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದ್ದಾರೆ. ಈ ವೇಳೆಯಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ.
LOCAL EXPRESS : ಗುದ್ನೇಶ್ವರ ದೇವಸ್ಥಾನದ ಜಮೀನು ಉಳಿವಿಗಾಗಿ ಗ್ರಾಮಸ್ಥರು “ಕೊಪ್ಪಳ ಚಲೋ”..!
“ಯಾವುದೇ ಕಾರಣಕ್ಕೂ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಬಿಡುವುದಿಲ್ಲ” ಎಂದು ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಯಾವ ತೀರವು ಪಡೆದುಕೊಳ್ಳಲಿದೆ ಎಂದು ಭಾರೀ ಕೂತುಹಲ ಮೂಡಿಸಿದೆ ಎನ್ನಲಾಗಿದೆ.