ಕುಕನೂರು : ಗುದ್ನೇಶ್ವರ ಮಠದ ಜಾಗದಲ್ಲಿ ತಾಲೂಕಿನ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ಸ್ಥಳೀಯರು ವಿರೋದಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಜಿ. ಜಿ. ಗ್ರಾನೈಟ್ ಮತ್ತು ಸುತ್ತಮುತ್ತಲ ರೈತರನ್ನು ಮನವೊಲಿಸಿ ಭೂಸ್ವಾಧೀನ ಪಡೆಸಿಕೊಂಡು ಅಲ್ಲಿ ಆಡಳಿತ ಕಚೇರಿ ಕಟ್ಟಡ ಕಟ್ಟಲು ಮುಂದಾಗಬೇಕು ಎಂದು ಕುಕನೂರಿನ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
KOPPAL NEWS : ಜಿಲ್ಲಾ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರ : ಬೆಳಗ್ಗೆ 10ರಿಂದ ಸಂಜೆವರೆಗೆ 267 ಅರ್ಜಿಗಳ ಸ್ವೀಕಾರ..!!
ಈ ಬಗ್ಗೆ ಸೋಮವಾರ ನಿನ್ನೆ ಕುಕನೂರು ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರು, ನಾಗರಿಕ ವೇದಿಕೆ, ಹಮಾಲರ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಸಾರ್ವಜನಿಕರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ತಾಲೂಕಿನ ಜನತೆಯ ಅನುಕೂಲಕ್ಕಾಗಿ ಅಧಿಕಾರಿಗಳು ಆದಷ್ಟು ಬೇಗ ಕುಕನೂರು ತಾಲೂಕು ಆಡಳಿತ ಕಚೇರಿ ಹಾಗೂ ಕೋರ್ಟ್ ಹಾಲ್, ಬುದ್ದ ಬಸವ ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಮಸ್ತ ಕುಕನೂರಿನ ಕಾಂಗ್ರೆಸ್ ಕಾರ್ಯಕರ್ತರು ಕೇಳಿಕೊಂಡಿದ್ದಾರೆ.
ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳೀಯರ ವಿರೋಧ ಹಿನ್ನೆಲೆ. ಜಿ ಜಿ ಗ್ರಾನೈಟ್ ಸ್ವಾಧೀನಕ್ಕೆ ಸಾರ್ವಜನಿಕರ ಮನವಿ.
ಈ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಜಮೀನನ್ನು ಸ್ವಾಧೀನ ಪಡೆಸಿಕೊಳ್ಳಿ ಎಂದು ಹೇಳಿದ್ದಾರೆ. ಗುದ್ನೇಶ್ವರ ಮಠದ ಜಮೀನು ವಿಷಯ ಇದೀಗ ಅಧಿಕೃತವಾಗಿ ರಾಜಕಾರಣ ಬೆರೆತುಹೋಗಿದೆ. ಗುದ್ನೇಶ್ವರ ಮಠದ ಜಮೀನು ವಿಷಯ ರಾಜಕೀಯ ಪ್ರೇರಿತ ಎಂದು ಜಗತ್ ಜಾಹೀರ ಆಗಿದೆ.