BREAKING : ಪ್ರತಿಭಟನೆ ಮಾಡಿದ ಕರವೇ ಯುವ ಸೈನ್ಯ : “ಕರ್ನಾಟಕ ಬಂದ್‌”ಗೆ ಬೆಂಬಲ ಇಲ್ಲ”..!!

You are currently viewing BREAKING : ಪ್ರತಿಭಟನೆ ಮಾಡಿದ ಕರವೇ ಯುವ ಸೈನ್ಯ : “ಕರ್ನಾಟಕ ಬಂದ್‌”ಗೆ ಬೆಂಬಲ ಇಲ್ಲ”..!!

ಕುಕನೂರು : ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಕೆಆರ್‍‌ಎಸ್‌ ಡ್ಯಾಂನಿಂದ ನಿರಂತರವಾಗಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ “ಕರ್ನಾಟಕ ಬಂದ್‌” ಗೆ ಕರೆ ಕೊಟ್ಟಿದ್ದು, ಇಂದು ದಕ್ಷಿಣ ಕರ್ನಾಟಕದಲ್ಲಿ ಭಾರೀ ಬೆಂಬಲ ದೊರೆಯಿತು. ಅದರಂತೆ ಉತ್ತರ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ಬಂದಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಯಾವುದೇ ಬಂದ್‌ಗೆ ಬೆಂಬಲ ಇಲ್ಲದಿರುವುದು ಕಂಡು ಬಂತು. ಕೊಪ್ಪಳ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರೀಯೆ ಬಂದಿದೆ.

BREAKING : ಕಾಂಗ್ರೆಸ್‌ ಶಾಸಕನಿಗೆ ಬಿಗ್‌ ಶಾಕ್‌..!! : ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹ..!!

Karnataka Bandh : “ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಇಲ್ಲ”..! : ಹೀಗೆ ಅಂದಿದ್ಯಾಕೆ?

ಕುಕನೂರು ಪಟ್ಟಣದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ಸಾಂಕೇತಿವಾಗಿ ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧ ಘೋ‍ಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಬಳಿಕ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಎಚ್‌ ಪ್ರಾಣೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎಚ್‌ ಪ್ರಾಣೇಶ್‌, ” ಕೂಡಲೇ ಈ ನಿಮ್ಮ ಮನವಿ ಪತ್ರವನ್ನು  ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮುಖಾಂತರ ಕಳುಹಿಸಿಕೊಡಲಾಗಿತ್ತದೆ” ಎಂದರು.

 

BIG NEWS : ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಜಿ. ಜಿ. ಗ್ರಾನೈಟ್ ಸ್ವಾಧೀನ ಪಡೆಸಿಕೊಳ್ಳಿ ಎಂದ ಕಾಂಗ್ರೆಸ್‌ ಕಾರ್ಯಕರ್ತರು..!!

ಈ ವೇಳೆ ಕರವೇ ಯುವ ಸೈನ್ಯ ಜಿಲ್ಲಾಧ್ಯಕ್ಷ ಚಂದ್ರಕಾಂತ್ ದೊಡ್ಡಮನಿ ಮಾತನಾಡಿ, “ನಾವು ಕರ್ನಾಟಕ ಬಂದ್‌ಗೆ ಬೆಂಬಲ ನೀಡುತ್ತಿಲ್ಲ, ಆದರೆ, ವಾಡಿಕೆ ಅಷ್ಟು ಈ ಸಲ ರಾಜ್ಯದಲ್ಲಿ ಮಳೆ ಬಂದಿಲ್ಲ. ಹಾಗಾಗಿ ಕಾವೇರಿ ಕೊಳ್ಳ ಕಾಲಿಯಾಗಿದೆ. ಈ ಸಮಯದಲ್ಲೂ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಕೆಆರ್‍‌ಎಸ್‌ ಡ್ಯಾಂನಿಂದ ನಿರಂತರವಾಗಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸುತ್ತೇವೆ” ಎಂದು ಹೇಳಿದರು.

ಪ್ರತಿಭಟನೆಯಿಂದ ದೂರ ಉಳಿದ ತಾಲೂಕಿನ ಕೆಲ ಸಂಘಟನೆಗಳು..!!

ನೂರಾರು ಸಂಘಟನೆಗಳು ಸಂಘ ಸಂಸ್ಥೆಗಳು, ಯೂನಿಯನ್ ಗಳು, ಈ ಬಂದ್ ಗೆ ಬೆಂಬಲ ಸೂಚಿಸಿವೆ. ಆದರೆ ಸ್ಥಳೀಯ ಕನ್ನಡ ಹೋರಾಟಗಾರ ಎಂದು ಹೇಳಿಕೊಂಡು ತಿರುಗಾಡುವ, ನವೆಂಬರ್ ತಿಂಗಳಲ್ಲಿ ಮಾತ್ರ ತಮ್ಮ ಕನ್ನಡ ಪ್ರೇಮ ತೋರಿಸುವ ಸಂಘಟಕರು ಪ್ರತಿಭಟನೆಯಿಂದ ದೂರ ಉಳಿದಿದ್ದು ಸಾರ್ವಜನಿಕ ರು ಇವರ ಕನ್ನಡ ನೆಲ ಜಲ ಬಗ್ಗೆ ಇರುವ ಕಾಳಜಿ ಎಷ್ಟು ಎಂದು ಕೇಳುತ್ತಿದ್ದಾರೆ. ಇಂತವರು ಕನ್ನಡ ಪರ ಕಾರ್ಯಕ್ರಮಗಳಲ್ಲಿ ಚಂದಾ ಶೂರರಾಗಿ ಮಾತ್ರ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾದ ಸಂಘಟನೆಗಳು..!!

ಚುನಾವಣೆಯಲ್ಲಿ ಕೆಲ ರಾಜಕೀಯ ಪಕ್ಷಕ್ಕೆ ಬಹಿರಂಗ ಬೆಂಬಲ ಕೊಟ್ಟ ಕೆಲ ತಾಲೂಕಿನ ರೈತ ಸಂಘದವರು ಕಾವೇರಿ ಹೋರಾಟಕ್ಕೆ ಬೆಂಬಲಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

error: Content is protected !!