ಗಂಗಾವತಿ : ನಗರದ ಹೆಚ್‌ಆರಎಸ್ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡ್ತಿಯ ಸಹೋದರಿಯ ಗಂಡನನ್ನು ಕತ್ತು ಕೊಯ್ಯುದು ಕೊಲೆ ಮಾಡಿ ತಾನೇ ಖುದ್ದಾಗಿ ಠಾಣೆಗೆ ಶರಣಾದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
FLASH NEWS : ಸಚಿವ ಶಿವರಾಜ ತಂಗಡಗಿ ಅವರಿಂದ ದಸರಾ ಉತ್ಸವ ಪೋಸ್ಟರ್ ಬಿಡುಗಡೆ
ಚಿಕನ್ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದ ತನ್ನ ಹೆಂಡ್ತಿಯ ಸಹೋದರಿಯ ಗಂಡನನ್ನು ನೂರ್ ಎಂಬಾತ ತನ್ನ ಹೆಂಡ್ತಿಯ ಸಹೋದರಿಯ ಗಂಡನನ್ನು ಮೌಲಾನಿಗೆ ಕತ್ತು ಕೋಯ್ಯುದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನೂರ್ ನ ಹೆಂಡತಿಗೆ ಮೂರು ತಿಂಗಳ ಹಿಂದೆ ಹೆರಿಗೆ ಆಗಿತ್ತು, ಮನೆಗೆಲಸ ನೋಡಿಕೊಂಡು ಹೊಗುವುದುದಕ್ಕೆ ಹೆಂಡತಿಯ ಅಕ್ಕ ಹಾಗು ಆತನ ಗಂಡ ಮೌಲಾ ನನ್ನು ತನ್ನ ಮನೆಯಲ್ಲೆ ಇರಿಸಿಕೊಂಡಿದ್ದ.
ಇತ್ತೀಚಿಗೆ ಮೃತ ವ್ಯಕ್ತಿ ಮೌಲಾ ಮತ್ತು ಆತನ ಹೆಂಡತಿ ತನ್ನ ಹೆಂಡತಿಗೆ ತನ್ನ ಬಗ್ಗೆ ಇಲ್ಲಸಲ್ಲದ ಆರೋಪದ ಹಿನ್ನಲೆಯಲ್ಲಿ ಕುಪಿತಗೊಂಡ ನೂರ್ ನಿನ್ನೆ ತನ್ನ ಹೆಂಡತಿ ಹಾಗು ಆಕೆಯ ಅಕ್ಕನನ್ನು ಕಾರಟಗಿಯಲ್ಲಿರುವ ತವರು ಮನೆಗೆ ಕಳುಹಿಸಿ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
LOCAL EXPRESS : ಸರ್ಕಾರಿ ಜಾಗದಲ್ಲಿಯೇ ತಹಸೀಲ್ದಾರ್ ಕಚೇರಿ ಕಟ್ಟಿ. ಬಡವರ ಭೂಮಿ ಸ್ವಾಧೀನ ವಿರೋಧಿಸಿ ಧರಣಿ
ಕೃತ್ಯ ಎಸಗಿದ ನಂತರ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೊಲೆ ಮಾಡಿದ ಬಗ್ಗೆ ಸ್ವತ ತಾನೇ ಬರೆದುಕೊಂಡಿದ್ದಾನೆ. ಮೃತನಿಗೆ ಒಂದು ಹೆಣ್ಣು ಹಾಗು ಗಂಡು ಮಗುವಿದೆ ಎಂದು ಮಾಹಿತಿ ಲಭ್ಯವಾಗಿದೆ. ಮತ್ತು ಇದೆ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆ ಎಸ್ಪಿ ಗಂಗಾವತಿ ನಗರ ಠಾಣೆಗೆ ಆಗಮಿಸಿ, ಕೊಲೆಯಾದ ವ್ಯಕ್ತಿಯ ಸಂಬಂಧಿಕರನ್ನು ಸಾಂತ್ವನ ಹೇಳಿ ಕಾನೂನು ರೀತಿಯಾಗಿ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
SPECIAL STORY : ಕೊಪ್ಪಳದ ಹಿಂದೂ ಮಹಾ ಮಂಡಳಿಯ “ಗಣಪತಿ ಮೂರ್ತಿ ಪ್ರತಿಸ್ಠಾಪನೆ” ಹಿನ್ನೋಟ!!
ಇನ್ನು ಈ ಘಟನಕ್ಕೆ ಸಂಬಂಧಿಸಿದಂತೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಪೊಲೀಸರ ಶೋಧ ಕಾರ್ಯದಿಂದ ಸತ್ಯ ಸತ್ಯತೆಯನ್ನು ಹೊರ ಬರಬೇಕಾಗಿದೆ. ಘಟನಾ ಸ್ಥಳಕ್ಕೆ ನಗರಠಾಣೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.