ಕುಕನೂರು : ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಮಳೆಯು ಸಹ ಈ ವರ್ಷ ಕೈ ಕೊಟ್ಟಂತಾಗಿದೆ.
LOCAL EXPRESS : ಗಣೇಶ ವಿಸರ್ಜನೆ ಗೊಂದಲ : ಪೊಲೀಸ್ ಇಲಾಖೆ ಮೇಲೆ ಗೂಬೆಕೂರಿಸುವುದು ಎಷ್ಟರ ಮಟ್ಟಿಗೆ ಸರಿ!!
ಸರ್ಕಾರ ಎರಡು ದಿನದೊಳಗೆ ಮೋಡ ಬಿತ್ತನೆ ಕಾರ್ಯವನ್ನು ಕೈಗೊಳ್ಳಬೇಕು ಒಂದುವೇಳೆ ಸರ್ಕಾರ ಮೋಡಬಿತ್ತನೆ ಮಾಡದೇ ಹೋದರೆ ಹಿಂಗಾರು ಬರ ಘೋಷಣೆ ಮಾಡಿ ರೈತರಿಗೆ ಒಂದು ಎಕರೆಗೆ ಕನಿಷ್ಠ 30ರಿಂದ35ಸಾವಿರ ರೂಪಾಯಿ ಬರ ಪರಿಹಾರ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅದಕ್ಕಾಗಿ ರೈತರಿಗೆ ಬರ ಎನ್ನುವ ಶಬ್ದವನ್ನು ಬಿಟ್ಟು. ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಂದಯ ಸಚಿವ ಕೃಷ್ಣ ಬೈರೇಗೌಡ. ಸಂಬಂಧಪಟ್ಟ ಸಚಿವರು ವಿಧಾನ ಸೌಧದಲ್ಲಿ ಚರ್ಚೆಮಾಡಿ ಶೀಘ್ರದಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬೇಕು
ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಬೇತಲ್ ಕಾಲೇಜಿನ ಕ್ರೀಡಾಪಟುಗಳು
ಹೌದು, ಸರ್ಕಾರ ರೈತರ ಕಷ್ಟವನ್ನು ತಪ್ಪಿಸಬೇಕೆಂದರೆ ಹಿಂಗಾರು ಮೋಡ ಬಿತ್ತನೆ ಮಾಡಬೇಕು ರೈತರಿಗೆ ಸರ್ಕಾರ ಮುಂಗಾರು ಬರ ಘೋಷಣೆ ಮಾಡಿ ತಿಂಗಳ ಕಳೆದರೂ ಬರ ಪರಿಹಾರ ಕೊಟ್ಟಿಲ್ಲ ಶೀಘ್ರದಲ್ಲಿ ಮುಂಗಾರು ಬರ ಪರಿಹಾರ ಕೊಡಬೇಕು ಬೆಳೆವಿಮೆ ತುಂಬಿ ಹಾಳಾದ ರೈತರಿಗೆ ಏಳು ವರ್ಷದ ಬೆಳೆವಿಮೆ ಬಿಡುಗಡೆ ಮಾಡಬೇಕು.
BIG NEWS : ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ..!!
ಬಿತ್ತಿದ ಬೆಳೆ ಹಾಳಾದ ರೈತರಿಗೆ ಸರ್ಕಾರ ಪರಿಹಾರ ಕೊಡಬೇಕು ರೈತರು ಬೆಳೆವಿಮೆ ತುಂಬಿದ್ದು ಎಷ್ಟು ವರ್ಷದವರೆಗೆ ನಿಲುಗಡೆ ಆಗಿರುತ್ತದೆ ಅಷ್ಟು ವರ್ಷಗಳಿಂದಲು ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿದರು.
ವರದಿ : ವಿಶ್ವನಾಥ್ ಪಟ್ಟಣಶೆಟ್ಟಿ