LOCAL EXPRESS : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಕನೂರಿನ ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು.!!

You are currently viewing LOCAL EXPRESS : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಕನೂರಿನ ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು.!!

ಕೊಪ್ಪಳ : ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರೌಢಶಾಲಾ ವಿಭಾಗ ಶಿಕ್ಷಣ ಇಲಾಖೆಯ ಇವರ ಸಂಯುಕ್ತ ಆಶ್ರಯಲ್ಲಿ ಇಂದು “ಜಿಲ್ಲಾ ಮಟ್ಟ ಪ್ರೌಢಶಾಲೆಗಳ ಕ್ರೀಡಾಕೂಟ”ವು ನಡೆಯಿತು.

ಜೀ ಕನ್ನಡ ಸ್ಟಾರ್ ಗಳಿಂದ, ಅದ್ದೂರಿ ಸಂಗೀತ ಸಂಜೆ 

ಈ ಕ್ರೀಡಾಕೂಟದಲ್ಲಿ ಇಂದು ವೈಯಕ್ತಿಕ ಕ್ರೀಡೆಗಳು ನಡೆದಿದ್ದು, ಈ ಕ್ರೀಡೆಯಲ್ಲಿ ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು ಮತ್ತರ ಸಾಧನೆ ಮಾಡಿದ್ದು, ಗುಂಡು, ಚಕ್ರ, ಸರಪಳಿ ಗುಂಡು ಎಸೆತಗಳಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

BREAKING : ಭೀಕರ ದುರಂತ : ಸ್ಥಳದಲ್ಲೇ 7 ಜನರ ಸಾವು..!!

ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು ವಿಶೇಷ ಸಾಧನೆ ಮಾಡಿದ್ದು, 1. ಶಶಿಕುಮಾರ ಕಾರಭಾರಿ, (10 ನೇ ತರಗತಿ ವಿದ್ಯಾರ್ಥಿ) ಗುಂಡು ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, 2. ಶೈಲಾ ಮನ್ನಾಪೂರ (8ನೇ ತರಗತಿ ವಿದ್ಯಾರ್ಥಿನಿ) ಗುಂಡು ಹಾಗೂ ಚಕ್ರ ಎಸೆತ ದ್ವೀತಿಯ ಸ್ಥಾನ, 3. ಅನ್ನಪೂರ್ಣೇಶ್ವರಿ ರಾಟಿಮನಿ (10ನೇ ತರಗತಿ ವಿದ್ಯಾರ್ಥಿನಿ) ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ್ದಾರೆ. ಈ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಈ ಮೂವರು ಕುಕನೂರು ಪಟ್ಟಣಕ್ಕೆ ಸಮೀಪ ಇರುವ ಕಕ್ಕಿಹಳ್ಳಿ ತಾಂಡಾದ ಬಂಜಾರ ಸಮೂದಾಯಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ತಾಲೂಕಿಗೆ ಹಾಗೂ  ಶಿಕ್ಷಣ ಸಂಸ್ಥೆಗೆ, ಜೊತೆಗೆ ಬಂಜಾರ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.

KOPPAL NEWS : ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ವಕೀಲರ ಪಾತ್ರ ಅತ್ಯವಶ್ಯಕ: ನ್ಯಾ ಕೆ.ಎನ್. ಫಣೀಂದ್ರ

ಈ ಸಂದರ್ಭದಲ್ಲಿ  ಗವಿಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯೋಪಾದ್ಯಯ ಎಸ್‌ ಜೆ ಪಾಟೀಲ್‌, ದೈಹಿಕ ಶಿಕ್ಷಕ ರಾಜ್‌ಕುಮಾರ್‌ ರಾಠೋಡ್ ಇದ್ದರು.

“ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಬೆಳಗ್ಗೆ  6 ಗಂಟೆಗೆ ಬಂದು ತುಂಬಾ ಶ್ರದ್ಧೆಯಿಂದ ದಿನಾಲು ಪ್ರಾಕ್ಟೀಸ್‌ ಮಾಡಿ, ಇಂದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವುದು ನನಗೆ ಬಹಳಷ್ಟು ಸಂತೋಷ ತಂದಿದೆ. ನಮ್ಮ ಸಂಸ್ಥೆ, ಕುಕನೂರು ತಾಲೂಕಿಗೆ ಹಾಗೂ ಬಂಜಾರ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ “

ರಾಜ್‌ಕುಮಾರ್ ರಾಠೋಡ

ದೈಹಿಕ ಶಿಕ್ಷಕರು, ಗವಿಸಿದ್ದೇಶ್ವರ ಪ್ರೌಢಶಾಲೆ ಕುಕನೂರು.

 

 

Leave a Reply

error: Content is protected !!