ಕುಕನೂರು : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಹುಟ್ಟಿದ ದಿನವನ್ನು ತಾಲೂಕಿನ ಕಕ್ಕಿಹಳ್ಳಿ ತಾಂಡಾದ ಅಪ್ಪಟ ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದರು.
ಇಂದು ಕಿಂಗ್ ಕೊಹ್ಲಿ ಅವರ 35ನೇ ಜನುದಿನದವನ್ನು ಕಕ್ಕಿಹಳ್ಳಿ ತಾಂಡಾದಲ್ಲಿ ಯುವಕರು ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹಾಗೂ ಕೇಕ್ ಕತ್ತಿರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.
ಇಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಶತಕ ಬಾರಿಸುವುದರ ಮೂಲಕ 49ನೆಯ ಓಡಿಐ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸೆರೆಗಟ್ಟಿದ್ದಾರೆ. ಜೊತೆಗೆ ಇಂದಿನ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು, ಟೀಮ್ ಇಂಡಿಯಾ ಗೆಲ್ಲಲಿಕ್ಕೆ ಮಹತ್ವದ ಪಾತ್ರವಹಿಸಿದ್ದಾರೆ
ಈ ಸಂದರ್ಭದಲ್ಲಿ ಕೀರಣ, ವಿಷ್ಣು, ಪ್ರಶಾಂತ್, ನಂದಾ ಕಾರಭಾರಿ, ಸುರೇಶ್, ತಿರುಪತಿ, ತಿರುಪತಿ, ಶಶಿಕುಮಾರ್, ಪ್ರತಾಪ್, ಕರೀ ಇಡ್ಲಿ, ಮೇಘಾ, ಶಿವು, ಅರುಣ, ಚಿಂತಾಮಣಿ, ಪ್ರಜ್ವಲ್, ಮೇಘಾರಾಜ್, ಬಾಲಾಜಿ, ಸೃಜನ್, ಪ್ರವೀಣ್, ಧನುಶ್, ಯಲ್ಲು, ಇದ್ದರು,