BREAKING : ಹಿರಿಯ ನಟಿ ಲೀಲಾವತಿ ವಿಧಿವಶ..!!

You are currently viewing BREAKING : ಹಿರಿಯ ನಟಿ ಲೀಲಾವತಿ ವಿಧಿವಶ..!!

ಬೆಂಗಳೂರು : ಕನ್ನಡದ ಚಲನಚಿತ್ರದ ಹಿರಿಯ ನಟಿ ಲೀಲಾವತಿ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ, ಲೀಲಾವತಿ ಅವರು ತಮ್ಮ ಸ್ವಗೃಹದಲ್ಲದೇ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಅವರನ್ನು ಇಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ ಎಂದು ಅಧಿಕೃತ ಮಾಹಿತಿ ತಿಳಿದು ಬಂದಿದೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BIG NEWS : ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : 10 ಕೋಟಿ ದಂಡ, 12 ವರ್ಷ ಜೈಲು..!!

ಅವರ ಅಂತ್ಯಕ್ರಿಯೆಯನ್ನು ನೆಲಮಂಗಲದಲ್ಲಿರುವ ಅವರ ತೋಟದ ಮನೆಯಲ್ಲೇ ನೇರವೇರಲಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಇಂದು ರಾತ್ರಿ ಅವರ ಪಾರ್ಥೀವ ಶರೀರವವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಬಳಿಕ ಅವರ ಅಂತ್ಯಕ್ರಿಯೆಯನ್ನು ನೇರವೇರಸಲಾಗುವುದು ಅಂತ ತಿಳಿದು ಬಂದಿದೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BREAKING : ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತರ ದಾಳಿ : ಗಂಗಾವತಿಯಲ್ಲಿ ಇಂಜಿನಿಯರ್ ಗೆ ಶಾಕ್!!

ಲೀಲಾವತಿ ಅವರು ದಕ್ಷಿಣ ಭಾರತದ ನಟಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ “ಡಾ. ರಾಜಕುಮಾರ್ ಪ್ರಶಸ್ತಿ”ಯನ್ನು 1999-2000ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, ‘ತುಮಕೂರು ವಿಶ್ವವಿದ್ಯಾಲಯ’ದ “ಗೌರವ ಡಾಕ್ಟರೇಟ್” ಪದವಿಯನ್ನು 2008ರಲ್ಲಿ ಪಡೆದಿದ್ದರು.

Leave a Reply

error: Content is protected !!