ಕುಕನೂರು : ಜಿಲ್ಲೆಯ ಕುಕನೂರು ತಾಲೂಕಿನ ಗುದ್ನೆಪ್ಪನ ಮಠದ ಐತಿಹಾಸಿಕ ಪಂಚಕಳಸ ಅದ್ಧೂರಿ ಮಹಾರಥೋತ್ಸವವು ಹುಣ್ಣಿಮೆಯ ದಿನ ಇದೇ ಡಿಸೆಂಬರ್ 26 ರಂದು ಜರಗುಲಿದೆ ಎಂದು ತಹಶೀಲ್ದಾರರ ಕಛೆರಿ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಸಂಸತ್ ಭವನದಲ್ಲಿ “ಸ್ಮೋಕ್ ಕ್ಯಾನ್” ಸ್ಪೋಟ : ಸ್ಪೋಟಕ ಮಾಹಿತಿ ಬಹಿರಂಗ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ವಿತರಣೆ!
ಪ್ರತಿ ವರ್ಷದಂತೆ ಈ ವರ್ಷವು ಕೂಡ “ಹೊಸ್ತಲ ಹುಣ್ಣಿಮೆಯ ದಿನ”ದಂದು ಜಿಲ್ಲೆಯಲ್ಲಿ ಪ್ರಸಿದ್ದ ಪಡೆದ ಪಂಚಕಳಸ ಮಹಾರಥೋತ್ಸವ 26 ಮಂಗಳವಾರ ನೆರವೇರಲಿದೆ. ಈ ಅಮೃತಗಳಿಗೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಗವಿಸಿದ್ದೇಶ್ವರ ಸಂಸ್ಥಾನ ಮಠದ ಕೊಪ್ಪಳ. ದಾಸೋಹ ಮೂರ್ತಿ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಬೆದವಟ್ಟ, ಶ್ರೀ ಪ್ರಭಮಲಿಂಗದೇವರು ಗುದ್ದೇಶ್ವರಮಠ,ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀಧರಮುರಡಿ ಹಿರೇಮರ ಯಲಬುರ್ಗಾ, ಶ್ರೀಮ.ನಿ.ಪ್ರ. ಡಾ।। ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಅನ್ನದಾನೀಶ್ವರ ಶಾಖಾಮಠ, ಕುಕನೂರು, ಇವರುಗಳ ಸಾನಿಧ್ಯದಲ್ಲಿ ಹಾಗೂ ಚಿನ್ನಾಳ ಗ್ರಾಮದ ಶ್ರೀ 8 ಬಸವೇಶ್ವರ ದೇವಸ್ಥಾನದ ನಂದಿಕೋಲ ಸೇವೆ ಹಾಗೂ ಕಕ್ಕಿಹಳ್ಳಿ ಶ್ರೀ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವಾದೊಂದಿಗೆ ವೈಭವ ವಿಜೃಂಭಣೆಯಿಂದ ಭಣೆಯಿಂದ ಮಹಾರಥೋತ್ಸವ ನೆರವೇರಿಸಲ್ಪಡುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG ALERT : ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಎಚ್ಚರ…ಎಚ್ಚರ..!!
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!
ಇಂದು ಜಾತ್ರೆಯ ಹಿನ್ನೆಲೆಯಲ್ಲಿ ಗುದ್ನೇಶ್ವರನ ತೇರಿನ ಗಡ್ಡಿಯನ್ನು ಇಂದು ಹೊರಗೆ ಹಾಕಲಾಯಿತು. ಇಂದಿನಿಂದ 15 ದಿನಗಳ ಕಾಲ ಧಾರ್ಮಿಕ ಕಾರ್ಯ, ಪೂಜಾ ಕೈಂಕರ್ಯ ಜರಗುವವು, 25 ರಂದು ಹಿರೇ ಹುಚ್ಚಾಯ, ಲಘು ರಥ ಎಳೆಯುವುದು, 26 ಪಂಚ ಕಳಸದ ಮಹಾರಥೋತ್ಸವ, 27 ರಂದು ಕಡುಬಿನ ಕಾಳಗ ನಡೆಯಲಿದೆ.