BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!

You are currently viewing BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!

ವರದಿ : ಚಂದ್ರು ಆರ್ ಭಾನಾಪೂರ್

9538631636

ಕುಕನೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

Breaking News : ಪಟ್ಟಣದಲ್ಲಿ ತಡರಾತ್ರಿ ಮೋಬೈಲ್ ಶಾಪ್ ಕಳ್ಳತನ

ನಿನ್ನೆ ಬೆಳಗಾವಿಯ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರಾಯರೆಡ್ಡಿ ಅವರು, ವೀರ ಸಾವರ್ಕರ ಅವರ ಪೋಟೋವನ್ನು ವಿಧಾನಸೌಧದ ಅವಳಡಿಕೆಯ ಕುರಿತು ನೀಡಿದ ಅಗೌರವ ಹೇಳಿಕೆಯನ್ನು ನವೀನ್ ಗುಳಗಣ್ಣನವರ್ ಖಂಡಿಸಿದ್ದಾರೆ.

Koppal Local : ಮಾನವ ಹಕ್ಕುಗಳ ರಕ್ಷಣೆ, ಜಾಗೃತಿ ಅತ್ಯಗತ್ಯ: ಸಾವಿತ್ರಿ ಕಡಿ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ನವೀನ್ ಗುಳಗಣ್ಣನವರ್, “ವಿಧಾನಸೌಧದಲ್ಲಿ ವೀರ ಸಾವರ್ಕರ್ ಅವರ ಫೋಟೋ ಅಳವಡಿಕೆ ಕುರಿತು ಬಸವರಾಜ್ ರಾಯರೆಡ್ಡಿ ಅವರ ಹೇಳಿಕೆ ಖಂಡನಿಯ, ನಿಮ್ಮ ಇಷ್ಟ ಕಷ್ಟಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ, ವೀರ ಸಾವರ್ಕರ್ ಬಗ್ಗೆ ನಿಮಗೆ ಗೊತ್ತಿಲ್ಲ ಅಂದ್ರೆ ಅವರ ಸ್ವತಂತ್ರ ಹೋರಾಟ ಕುರಿತ ಪುಸ್ತಕ ವನ್ನು ನಿಮ್ಮ ಮನೆಗೆ ಕಳಿಸುತ್ತೇನೆ ಒಮ್ಮೆ ಓದಿ” ಎಂದು ಬಿಜೆಪಿ ನಾಯಕ ನವೀನ್ ಗುಳಗಣ್ಣನವರ್ ಆಕ್ರೋಶ ಹೊರಹಾಕಿದ್ದಾರೆ.

Leave a Reply

error: Content is protected !!