Koppal Local : ಮಾನವ ಹಕ್ಕುಗಳ ರಕ್ಷಣೆ, ಜಾಗೃತಿ ಅತ್ಯಗತ್ಯ: ಸಾವಿತ್ರಿ ಕಡಿ

You are currently viewing Koppal Local : ಮಾನವ ಹಕ್ಕುಗಳ ರಕ್ಷಣೆ, ಜಾಗೃತಿ ಅತ್ಯಗತ್ಯ: ಸಾವಿತ್ರಿ ಕಡಿ

ಕೊಪ್ಪಳ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಗರದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಉದ್ಘಾಟಿಸಿ ಮಾತನಾಡಿ, ನಮಗೆ ಸಂವಿಧಾನಬದ್ದವಾಗಿ ಹಲವಾರು ಹಕ್ಕುಗಳು ಲಭಿಸಿದ್ದು, ಮಾನವ ಹಕ್ಕುಗಳ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ. ನಮ್ಮ ಹಕ್ಕುಗಳಿಗೆ ಧಕ್ಕೆಯಾಗದಂತೆ ರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯಪರ‍್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ಕಲಿಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ‍್ಯ, ನಂಬಿಕೆ ಮತ್ತು ಧರ‍್ಮಿಕ ಸ್ವಾತಂತ್ರ‍್ಯ ಮತ್ತು ಅಸ್ಪೃಶ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಎನ್ನುವ ಹಲವಾರು ಹಕ್ಕುಗಳು ನಮಗೆ ಸಂವಿಧಾನಬದ್ಧವಾಗಿ ಬಂದಿವೆ ಎಂದು ಅವರು ತಿಳಿಸಿದರು.


ಮಂಗಳೂರಿನ ಸರ್ಕಾರಿ  ಪ್ರಥಮ ದರ್ಜೆ  ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭುರಾಜ ನಾಯಕ ಅವರು ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬರನ್ನು ನಾವು ಪ್ರೀತಿಯಿಂದ ಕಾಣುವುದು ಮತ್ತು ಮಾನವೀಯತೆಯೊಂದಿಗೆ ಬದುಕುವುದೇ ಮಾನವ ಹಕ್ಕುಗಳ ರಕ್ಷಣೆಯ ಮಹತ್ತರ ಕಾರ್ಯವಾಗಿದೆ.. ಮಹಾತ್ಮಗಾಂಧೀಜಿಯವರು ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು ಎನ್ನುವ ಸಂದೇಶ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನ ರಚನೆಯ ಮೂಲಕ ಮಾನವ ಹಕ್ಕುಗಳಿಗೆ ದೊಡ್ಡ ರಕ್ಷಣೆ ನೀಡಿದರು. ಮಾನವ ಹಕ್ಕುಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದರು ಎಂದು ತಿಳಿಸಿದರು.

Breaking news :ಕುಕನೂರಿನ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ
ಧರ್ಮ  ಭಾಷೆ, ಜಾತಿ, ಲಿಂಗದ ಆಧಾರದ ಮೇಲೆ ಬೇಧ-ಭಾವ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಯಾವ ದೇಶದಲ್ಲಿ ಆರೋಗ್ಯವಂತ ಜನರಿರುತ್ತಾರೋ ಆ ದೇಶದ ಜನರು ಮಾನವ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ ಎಂದೇ ರ‍್ಥ ಎಂಬುದರ ಬಗ್ಗೆ ನಾವು ತಿಳಿಯಬೇಕು. ವ್ಯಕ್ತಿ ಸ್ವಾತಂತ್ರ‍್ಯ, ಶಿಕ್ಷಣ ಕೂಡ ನಮ್ಮ ಮೂಲಭೂತ ಹಕ್ಕಾಗಿದೆ. ಶುದ್ಧವಾದ ನೀರು, ಗಾಳಿ, ಆಹಾರ ಪಡೆಯುವುದು ಸಹ ಮಾನವ ಹಕ್ಕುಗಳಾಗಿವೆ. ಸರಿಯಾಗಿ ಔಷಧಿ ಸಿಗದಿದ್ದರೆ ಅಂತಹ ವ್ಯವಸ್ಥೆ ವಿರುದ್ದ ಬಂಡೇಳಬೇಕು ಎನ್ನುತ್ತಾರೆ ತಜ್ಞರು. ಈ ದಿಶೆಯಲ್ಲಿ ಯೋಚಿಸಿದಾಗ ಆರೋಗ್ಯವು ಒಂದು ಮೂಲಭೂತ ಹಕ್ಕಾಗಿದೆ. ಹೀಗಾಗಿ ಶುದ್ದ ನೀರು, ಗಾಳಿ, ಆಹಾರ ಸಿಕ್ಕರೆ ಅದೇ ಮಾನವ ಹಕ್ಕುಗಳ ರಕ್ಷಣೆ ಎಂದು ಎಲ್ಲರೂ ಪರಿಭಾವಿಸಬೇಕು ಎಂದರು.


ನಾವೆಲ್ಲರೂ ಜೀವಿಸುವ ಹಕ್ಕನ್ನು ಸಮಾನವಾಗಿ ಅನುಭವಿಸಬೇಕು. ನಮ್ಮಲ್ಲಿ ಮಾನವ ಸಹಜ ಅಸಮಾನತೆ ಸೃಷ್ಟಿಯಾಗಿದೆ. ಮಾನವ ಹಕ್ಕುಗಳು ಎಂದರೆ ಸಮಾನರಲ್ಲಿ ಸಮಾನತೆಯನ್ನು ಕೊಡುವಂತದ್ದಾಗಿದೆ. ಎಲ್ಲರಿಗೂ ಸಮಾನತೆ ಎಂದು ಹೇಳುತ್ತದೆ. ಮಾನಸಿಕ, ಆರ್ಥಿಕ , ಸಾಂಸ್ಕೃತಿಕ ಗುಲಾಮಗಿರಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ  ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ  ಜಗದೀಶ ಜೆ.ಹೆಚ್ ಅವರು ಮಾತನಾಡಿ, ಹುಟ್ಟಿನಿಂದಲೇ ನಾವು ಮಾನವ ಹಕ್ಕುಗಳನ್ನು ಪಡೆದಿದ್ದೇವೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  ಎಂದು ತಿಳಿಸಿದರು.

BIG NEWS : ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ..!!

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೃಷ್ಣ ಮೂರ್ತಿ  ದೇಸಾಯಿ ಅವರು ಪ್ರಾಸ್ತಾವಿಕ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ, 1993ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚನೆ ಮಾಡಲಾಗಿದೆ. ಪ್ರತಿಯೊಬ್ಬ ಪ್ರಜೆಯು ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ರ‍್ತವ್ಯವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಯಾವುದೇ ಕಚೇರಿಯಿಂದಾಗಲಿ ಅಥವಾ ಸಂಸ್ಥೆಯಿಂದಾಗಲಿ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂಧರ್ಭಗಳಲ್ಲಿ.ತೊಂದರೆಗೆ ಒಳಗಾದವರಾಗಲಿ ಅಥವಾ ಆತನ ಆಕೆಯ ಪರವಾಗಿ ಬೇರೆ ಯಾರಾದರಾಗಲೀ ಅವರ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗವನ್ನು ಸ್ಮರಿಸಬಹುದಾಗಿದೆ ಎನ್ನುವ ವಿಷಯವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ತಾಲೂಕು ಪಂಚಾಯತ್ ನಿರ್ವಹಣಾಧಿಕಾರಿ  ದುಂಡಪ್ಪ ತುರಾದಿ, ಕೊಪ್ಪಳ ತಾಲೂಕು ಗ್ರೇಡ್ 2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರ, ಜಿಲ್ಲಾ ವರ‍್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುನಿಸೆಪ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕರಾದ ಹರೀಶ್ ಜೋಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿ ಬಸವರಾಜ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದ ನಾಗರಾಜ, ಜಿಲ್ಲಾ ಗ್ರಂಥಾಲಯ ಇಲಾಖೆಯ ನಾಗರಾಜನಾಯಕ ಡೊಳ್ಳಿನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Breaking News : ಪಟ್ಟಣದಲ್ಲಿ ತಡರಾತ್ರಿ ಮೋಬೈಲ್ ಶಾಪ್ ಕಳ್ಳತನ

Leave a Reply

error: Content is protected !!