GOOD NEWS : ಯಲಬುರ್ಗಾ ಹಾಗು ಕುಕನೂರು ತಾಲೂಕಿನ ಜನತೆಗೆ ಶಾಸಕ ರಾಯರಡ್ಡಿ ಸಿಹಿ ಸುದ್ದಿ..!

You are currently viewing GOOD NEWS : ಯಲಬುರ್ಗಾ ಹಾಗು ಕುಕನೂರು ತಾಲೂಕಿನ ಜನತೆಗೆ ಶಾಸಕ ರಾಯರಡ್ಡಿ ಸಿಹಿ ಸುದ್ದಿ..!

ಕುಕನೂರು : ಮಹತ್ವದ ಯೋಜನೆಯಾದ “ಅಮೃತ್ 2.0” ಯೋಜನೆಯಡಿಯಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಕುಡಿವ ನೀರು ಒದಗಿಸುವ ಮಹತ್ವದ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಮಾಜಿ ಸಚಿವ ಹಾಗೂ  ಹಾಲಿ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 IPL 2024 :‌ 24.75 ಕೋಟಿ….ನಿಮಿಷಗಳಲ್ಲೇ ಕಮಿನ್ಸ್‌ ದಾಖಲೆ ಮುರಿದ ಸ್ಟಾರ್ಕ್..!! 

ಸದ್ಯ ಯಲಬುರ್ಗಾ ಹಾಗು ಕುಕನೂರು ತಾಲ್ಲೂಕಿನಲ್ಲಿ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಆಗಿದೆ. ಈ ಮೂಲಕ ಅವಳಿ ತಾಲೂಕುಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಎರಡು ತಾಲೂಕುಗಳಿಗೆ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಆಗಿದೆ. ಪಟ್ಟಣ ಹಾಗೂ ನಗರಗಳಿಗೆ ನೀರು ಒದಗಿಸಲು ನನ್ನ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದ್ದು, ಬರೋಬ್ಬರಿ 269 ಕೋಟಿ ಅನುದಾನ ದೊರೆತಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 Political Round : ಟಿಕೆಟ್ ಪಕ್ಕಾ ಮಾಡಿಕೊಳ್ಳಲು ದೆಹಲಿಗೆ ಹೋದ್ರಾ ಸಂಸದ ಸಂಗಣ್ಣ ಕರಡಿ ?

“ಅಮೃತ್ 2.0” ಯೋಜನೆಯಡಿಯಲ್ಲಿ ಸೇರ್ಪಡೆಯಾದ ಹೊಸ ಪ್ರದೇಶಗಳು

ಕುಕನೂರು, ಯಲಬುರ್ಗಾ, ತಳಕಲ್, ತಳಬಾಳ, ಭಾನಾಪೂರ, ತಳಕಲ್ ಎಂಜಿನಿಯರಿಂಗ್ ಕಾಲೇಜು, ಕೌಶಲ ಅಭಿವೃದ್ಧಿ ಕೇಂದ್ರ, ರೈಲ್ವೆ ಜಂಕ್ಷನ್, ಗೊಂಬೆ ಕ್ಲಸ್ಟರ್‍‌ಗಳಿಗೆ ನೀರು ಒದಗಿಸಲು ಅನುದಾನ ಬಿಡುಗಡೆ ಆಗಿದೆ. ಇವೆಲ್ಲಾ ಸ್ಥಳಗಳಿಗೆ ತುಂಗಭದ್ರಾ ನದಿಯಿಂದ ಸಂಪೂರ್ಣ ನೀರು ಪೂರೈಕೆ ಆಗಲಿದೆ ಎಂದು ಮಾಹಿತಿ ಇದೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉  BIG NEWS : ಇಂದಿನಿಂದಲೇ ಮಾಸ್ಕ್ ಕಡ್ಡಾಯ : ದಿನೇಶ್ ಗುಂಡೂರಾವ್

Leave a Reply

error: Content is protected !!