ಕೊಪ್ಪಳ : ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಪಕ್ಷದ ವರಿಷ್ಟರ ಭೇಟಿಗಾಗಿ ದೆಹಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದ್ದು ಸಂಸದ ಸಂಗಣ್ಣನವರ ದೆಹಲಿ ಭೇಟಿ ಜಿಲ್ಲೆಯಲ್ಲಿ ಕುತೂಹಲ ಹುಟ್ಟಿಸಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
BIG NEWS : ಇಂದಿನಿಂದಲೇ ಮಾಸ್ಕ್ ಕಡ್ಡಾಯ : ದಿನೇಶ್ ಗುಂಡೂರಾವ್
ಬಲ್ಲ ಮೂಲಗಳ ಪ್ರಕಾರ ಇಂದು ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಸದರು ದೆಹಲಿಗೆ ಹೋಗಿದ್ದಾರೆ ಎಂದು ತಿಳಿದುಬಂದಿದ್ದು ದೆಹಲಿ ಭೇಟಿಯ ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಅದರೆ ತೀವ್ರ ಕುತೂಹಲವಂತೂ ಹುಟ್ಟಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
“ಉಚಿತ ಹೊಲಿಗೆ (ಟೈಲರಿಂಗ್) ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ”
ಇನ್ನೂ ತೀವ್ರ ಕುತೂಹಲ ಸಂಗತಿ ಎಂದರೆ ಸಂಸದ ಸಂಗಣ್ಣ ಕರಡಿ ಒಬ್ಬರೇ ಮಾತ್ರವಲ್ಲ , ಬದಲಾಗಿ ಹಿಂದೂ ಫೈರ್ ಬ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಅನಂತ್ ಕುಮಾರ್ ಹೆಗಡೆ ಅವರೊಂದಿಗೆ ದೆಹಲಿ ಫ್ಲೈಟ್ ಏರಿದ್ದಾರೆ ಎನ್ನಲಾಗಿದೆ. ಕೊಪ್ಪಳ ಸಂಸದರ ದೆಹಲಿ ಭೇಟಿಯ ಲೆಕ್ಕಾಚಾರವೇನು ಎಂದು ನೋಡುವುದಾದರೆ 2024 ರ ಲೋಕಸಭೆ ಟಿಕೆಟ್ ಪಕ್ಕಾ ಮಾಡಿಕೊಳ್ಳುವುದು.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
LOCAL NEWS : ಪ್ರತಿಭೆಗಳಿಗೆ ಪುರಸ್ಕಾರ ಸಿಗಲಿ : ಬಿ.ಇ.ಒ ನಿಂಗಪ್ಪ
ಬಿಜೆಪಿ ಪಕ್ಷದ ಟಿಕೆಟ್ ತಮಗೆ ಸಿಗುವ ಬಗ್ಗೆ ಖಾತರಿ ಪಡಿಸಿಕೊಳ್ಳುವ ಉದ್ದೇಶದಿಂದ ಸಂಸದರು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದ್ದು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.