LOCAL NEWS : ಪ್ರತಿಭೆಗಳಿಗೆ ಪುರಸ್ಕಾರ ಸಿಗಲಿ : ಬಿ.ಇ.ಒ ನಿಂಗಪ್ಪ

You are currently viewing LOCAL NEWS : ಪ್ರತಿಭೆಗಳಿಗೆ ಪುರಸ್ಕಾರ ಸಿಗಲಿ : ಬಿ.ಇ.ಒ ನಿಂಗಪ್ಪ

ಕುಕನೂರು : ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಪುರಸ್ಕಾರ ಸಿಗುವಂತಾಗಲಿ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ ಟಿ ಹೇಳಿದರು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉  LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?

ತಾಲೂಕಿನ ರಾಜೂರು ಗ್ರಾಮದಲ್ಲಿ ಯಲಬುರ್ಗಾ ಕುಕನೂರು ಅವಳಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪ್ರತಿಭಾ ಕಾರಂಜಿ, ಕಲೋತ್ಸವ ದ ಅದ್ದೂರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೂರಿನ ಗ್ರಾಮದ ಜನರ ಸಹಕಾರ, ಇಲ್ಲಿಯ ಶಾಲೆಯ ಶಿಕ್ಷಕರು,ಎಸ್ ಡಿ ಎಂ ಸಿ ಸದಸ್ಯರ ಶ್ರಮದಿಂದ ಅದ್ದೂರಿ, ವಿಜೃಂಭಣೆ ಕಾರ್ಯಕ್ರಮ ಏರ್ಪಡಿಸಿದ್ದು ನಿಜಕ್ಕೂ ಅವಿಸ್ಮರಣೀಯ ಎಂದು ಹೇಳಿದರು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BIG BREAKING : ಯಲಬುರ್ಗಾ ವ್ಯಾಪ್ತಿಯಲ್ಲಿ ಅಂದರ್‌ ಬಾಹರ್‌ ಅಡ್ಡದ ಮೇಲೆ ದಾಳಿ : ಬರೋಬ್ಬರಿ 1.06 ಲಕ್ಷ ಹಾಗೂ 20 ಬೈಕ್ ವಶ..!! 

ಅವಳಿ ತಾಲೂಕಿನ ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳಿಂದ ಕಲಾ ನೃತ್ಯದೊಂದಿಗೆ , ಮಕ್ಕಳನ್ನು ಹೊತ್ತ ಎತ್ತಿನ ಬಂಡಿಯ ಶೃಂಗಾರದ ಅದ್ದೂರಿ ಮೆರವಣಿಗೆ ನಡೆಯಿತು.

 

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 LOCAL EXPRESS : ಇದೇ 26 ರಂದು ಗುದ್ನೆಪ್ಪನ ಮಠದ ಐತಿಹಾಸಿಕ ಪಂಚಕಳಸ ಅದ್ಧೂರಿ ಮಹಾರಥೋತ್ಸವ..!

ಮೆರವಣಿಗೆಯಲ್ಲಿ ಕಕ್ಕಿಹಳ್ಳಿ ವಿದ್ಯಾರ್ಥಿಗಳಿಂದ ಲಂಬಾಣಿ ಜಾನಪದ ನೃತ್ಯ, ರಾಜೂರು ಗ್ರಾಮದ ಹಳ್ಳಿ ಬಂಡಿಯ ಜೋಡೆತ್ತುಗಳು ಮೆರವಣಿಗೆಯಲ್ಲಿ ಕಣ್ಮನ ಸೆಳೆದವು. ಕಲ್ಲೂರು ವಿದ್ಯಾರ್ಥಿಗಳಿಂದ ಹೆಜ್ಜೆ ಮೇಳ ನೃತ್ಯ, ಮಂಗಳೂರು ವಿದ್ಯಾರ್ಥಿಗಳಿಂದ ಲೇಜಿಮ್, ಕುದ್ರಿಮೋತಿ ವಿದ್ಯಾರ್ಥಿಗಳಿಂದ ಕೋಲಾಟ ನೃತ್ಯ ಯಲಬುರ್ಗಾ ವಿದ್ಯಾರ್ಥಿಗಳಿಂದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ರಾಜೂರು, ಅಡೂರು ಬ್ರಹನ್ ಮಠದ ಪೂಜ್ಯ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲ್ಲಮ್ಮ ಹಿರೇಮನಿ, ಎಸ್ ಡಿ ಎಂ ಸಿ ಅಧ್ಯಕ್ಷ ಈರಪ್ಪ ಬಳಗೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ, ಸಮನ್ವಯ ಅಧಿಕಾರಿ ಅಶೋಕ್ ಗೌಡರ್, ಮಹೇಶ್ ಸಬರದ, ಫಿರ್ ಸಾಬ್ ದಫೆದಾರ್, ವೈ ಜೆ ಪಾಟೀಲ್, ದೈಹಿಕ ಪರಿವಿಕ್ಷಕ ವೀರಭದ್ರಪ್ಪ ಅಂಗಡಿ, ನೋಡಲ್ ಅಧಿಕಾರಿ ಕನಕಪ್ಪ ಕಂಬಳಿ, ಶಿಕ್ಷಕ ವೃಂದ, ಇತರರು ಪಾಲ್ಗೊಂಡಿದ್ದರು.

Leave a Reply

error: Content is protected !!