ವರದಿ :- ಚಂದ್ರು ಆರ್ ಭಾನಾಪೂರ್
ಯಲಬುರ್ಗಾ : ಇತ್ತೀಚೆಗೆ ಯಾರಿಗೂ ಅಂಜದೆ ಇಸ್ಪೀಟ್ ಆಡುವವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇಸ್ಪೀಟ್, ಜೂಜಾಟ ಹಾಗೂ ಮಟ್ಕಾ ದಂಧೆಗೆ ಕಲ ಜನರು ಇಳಿದಿರುವುದು ಹೆಚ್ಚಾಗಿದೆ. ಸ್ಪೀಟ್ ಆಟವನ್ನಾಡಲು ಅಡ್ಡೆಗೆ ಪ್ರವೇಶಿಸುವವರಿಗೆ 1,000 ರೂಪಾಯಿ ಎಂಟ್ರಿ ಫೀಸ್ ಕೊಟ್ಟು ಒಳಗಡೆ ಪ್ರವೇಶಿಸಬೇಕು. ಪೊಲೀಸ್‌ರನ್ನು ಕಾಯುವುದಕ್ಕೆ ಕೆಲವರನ್ನು ನೇಮಿಸಿರುತ್ತಾರೆ. ಇದರಿಂದ ಅನಧಿಕೃತ ಮಾರ್ಗದಲ್ಲಿ ದಿನವೂ ಲಕ್ಷಾಂತರ ಹಣ ಕೈ ಬದಲಾಗುತ್ತದೆ. ಇಂತವರಿಗೆ ಆವಾಗ ಆವಾಗ ಪೊಲೀಸರು ಬೀಸಿ ಕಾಣಿಸುತ್ತಾರೆ. ನಿನ್ನೆ ರಾತ್ರಿ ವೇಳೆ ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಸ್ಪೀಟ ಅಡ್ಡದ ಮೇಲೆ ಸಿಪಿಐ ಮೌನೇಶ್ ಮಾಲಿಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
BIG ALERT : ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಎಚ್ಚರ…ಎಚ್ಚರ..!!
ಯಲಬುರ್ಗಾ ತಾಲೂಕಿನ ಗದಗೇರಿ ಸೀಮಾ ಹಳ್ಳದಲ್ಲಿ ನಿನ್ನೆ (ಗುರುವಾರ-ಡಿಸೆಂಬರ್ 14 ರಂದು) ರಾತ್ರಿ 9:00 ಗಂಟೆಗೆ ಮೌನೇಶ ಮಾಲಿಪಾಟೀಲ್, ಸಿಪಿಐ ಯಲಬುರ್ಗಾ ವೃತ್ತ, ಹಾಗೂ ಟಿ. ಗುರುರಾಜ್ ಪಿಎಸ್‌ಐ ಕುಕನೂರು ಪೊಲೀಸ್ ಠಾಣೆ ಇವರ ತಂಡದವರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಇಸ್ಪೀಟ್ ಆಟಗಾರರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ಇಸ್ಟೇಟ ಜೂಜಾಟದ ಸಾಮಾಗ್ರಿಗಳನ್ನು ಮತ್ತು 20 ಮೋಟಾರ್ ಸೈಕಲಗಳು ಜಪ್ತ, ನಗದು ಹಣ 1,06,000 ರೂ.ಗಳು ಹಾಗೂ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!
ವಶಕ್ಕೆ ಒಳಪಟ್ಟವರು ಹೀಗಿದ್ದಾರೆ, ಗಿಡ್ಡಪ್ಪ ಜಿ. ರಾಠೋಡ್, ಅರವಿಂದ್ ಎಸ್. ಪೂಜಾರ್, ಮಂಜುನಾಥ್ ಕುಂಬಾರ, ಆ ಸ್ಥಳದಿಂದ ಓಡಿಹೋದವರು ನೀಲಪ್ಪ ರಾಠೋಡ್, ಲಕ್ಷ್ಮಣ್ ಅಜಮೀರ, ಗಣೇಶ್ ನಾಯ್ಕ್, ಕಳಕಯ್ಯ, ಬಾಳಪ್ಪ ಕುರಿ, ಪೀರಪ್ಪ ದುಪಾರ್ತಿ ಹಾಗೂ ಇತರರು ಎಂದು ಪ್ರಕರಣದಲ್ಲಿ ತಿಳಿಸಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಒಪ್ಪಿಗೆಗಾಗಿ ಕೋರಿಕೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….
NEWS EXPRESS : ಬಂಪರ್ ಕೊಡುಗೆ : ಯಲಬುರ್ಗಾ ಕ್ಷೇತ್ರಕ್ಕೆ 25 ಕೋಟಿ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್..!
:- ಇನ್ನಷ್ಟು ಮಾಹಿತಿ ಸದ್ಯದಲ್ಲೇ….
*ಪ್ರಜಾ ವೀಕ್ಷಣೆ – ಡಿಜಿಟಲ್ ಸುದ್ದಿ ಮಾಧ್ಯಮ*