ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಸಂಬಂದಿಸಿದಂತೆ 30 ಕೋಟಿ ಅನುದಾನವನ್ನು ನೀಡುವಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಶಾಸಕ ಬಸವರಾಜ ರಾಯರಡ್ಡಿ ಅವರು ಸಿ.ಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಕೊರಿದ ಹಿನ್ನಲೆ ಸಿ.ಎಂ.ಸಿದ್ದರಾಮಯ್ಯ 25 ಕೋಟಿಯ ವಿವಿಧ ಕಾಮಗಾರಿಗಳಿಗೆ ಹಣ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!
ಶಾಸಕ ಬಸವರಾಜ ರಾಯರಡ್ಡಿ ಅವರು ಸಿ.ಎಂ ಸಿದ್ದರಾಮಯ್ಯರಿಗೆ ಬರೆದ ಪತ್ರದ ಮೇಲೆ ಮುಖ್ಯಮಂತ್ರಿಗಳು ಒಪ್ಪಿಗೆ ಸಹಿ ಮಾಡಿ 25ಕೋಟಿ ಅಂತ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದೆ. ತಾಲೂಕಿನ ತಳಕಲ್ ಗ್ರಾಮದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 5ಕೋಟಿ, ಇಟಗಿ ಗ್ರಾಮದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ, ಬೆಣಕಲ್, ಹಿರೇಮ್ಯಾಗೇರಿ, ಮುರಡಿ, ಹಿರೇಅರಳಳ್ಳಿ ಹಾಗೂ, ಗಾಣದಾಳ ಗ್ರಾಮಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ತಲಾ 2ಕೋಟಿ, ಮತ್ತು ಸಂಗನಾಳ ಗ್ರಾಮದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 3 ಕೋಟಿ ಕಾಮಗಾರಿಗಳ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಸಿ.ಎಂ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿದ್ದಾರೆ.
Breaking News : ಪಟ್ಟಣದಲ್ಲಿ ತಡರಾತ್ರಿ ಮೋಬೈಲ್ ಶಾಪ್ ಕಳ್ಳತನ
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರಕ್ಕೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿರೋಧ ಪಕ್ಷದವರ ಟೀಕೆಗೆ, ಶಾಸಕ ಬಸವರಾಜ ರಾಯರಡ್ಡಿ 25 ಕೋಟಿಯ ಕಾಮಗಾರಿಗಳಿಗೆ ಒಪ್ಪಿಗೆ ಪಡೆದಿರುವುದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುತ್ಸಾಹ ಇಮ್ಮುಡಿಯಾಗಿದೆ.