ವರದಿ : ಚಂದ್ರು ಆರ್ ಭಾನಾಪೂರ್
ಕುಕನೂರು : ‘ಪ್ರಧಾನಿ ಮೋದಿ ಅವರು ಸುಳ್ಳು ಹಾಗೂ ಆಡಿದ ಮಾತುಗಳನ್ನು (ತಿರುಚುವ) ಉಲ್ಟಾ ಹೊಡೆಯುವುದರಲ್ಲಿ ನಿಶ್ಚಿಮರು ಎಂದು ಮುಖ್ಯಮಂತ್ರಿಗಳ ನೂತನ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ವ್ಯಂಗವಾಡಿದರು.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಗ್ಯಾರೆಂಟಿ ಯೋಜನೆಗಳ ಬಗ್ಗೆ ನನಗೆ ಭಯವಿದೆ : ಶಾಸಕ ರಾಯರೆಡ್ಡಿ..!!
ಪಟ್ಟಣದ ಹೃದಯ ಭಾಗವಾದ ತೇರಿನ ಗಡ್ಡೆಯಲ್ಲಿನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ರಾಯರೆಡ್ಡಿ ಅವರು, ‘ ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆಯಲ್ಲಿ ಆಧಾರ ಹಾಗೂ ಜಿಎಸ್‌ಟಿ ಜಾರಿಯ ಬಗ್ಗೆ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು, ಆಗ ಮೋದಿಯವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಧಾರ್ ಹಾಗೂ ಜಿಎಸ್‌ಟಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಧಾರ್ ಹಾಗೂ ಜಿಎಸ್ಟಿ ಯನ್ನ ಬಹಳ ಪರಿಣಾಮಕಾರಿಯಾಗಿ ಜಾರಿ ಮಾಡಿದ್ದಾರೆ. ಈ ವಿಚಾರದಲ್ಲಿ ಗೊತ್ತಾಗಲಿದೆ ಮೋದಿಯವರು ಸುಳ್ಳು ಹಾಗೂ ಮಾತಿಗೆ ಬದ್ಧವಾಗಿಲ್ಲ ಎನ್ನುವ ವಿಚಾರ ಎಂದು ತಿಳಿಸಿದರು.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 LOCAL BREAKING : ಜುಲೈನಲ್ಲಿ ಮಂತ್ರಿ ಸ್ಥಾನ, ಸಿಎಂ ಸಿದ್ದರಾಮಯ್ಯ ಭರವಸೆ : ಬಸವರಾಜ್ ರಾಯರಡ್ಡಿ ಹೇಳಿಕೆ..!!
ಅದೇ ರೀತಿಯಲ್ಲಿ ಇಂದು ಇಲ್ಲಿನ ರಾಜಕೀಯ ವ್ಯಕ್ತಿಗಳು ಇವರ ಸಿದ್ಧಾಂತವನ್ನೇ ಅನುಸರಿಸುತ್ತಿದ್ದಾರೆ. ಗದಗ-ವಾಡಿ ರೈಲ್ವೆ ಇನ್ನೇನು ಕೆಲವೇ ವರ್ಷಗಳಲ್ಲಿ ಪ್ರಾರಂಭವಾಗಲಿದ್ದು, ಇದನ್ನು ಕೂಡ ಇಲ್ಲಿನ ರಾಜಕೀಯ ವ್ಯಕ್ತಿಗಳು ಬೇಜವಾಬ್ದಾರಿ ಹೇಳಿಕೆ ನೀಡಿ “ರಾಯರೆಡ್ಡಿ ರೈಲು ಬಿಡೋದಿಲ್ಲ ರೀಲು ಬಿಡುತ್ತಾರೆ” ಎನ್ನುವ ಹೇಳಿಕೆಗಳನ್ನು ನೀಡಿರುವ ಉದಾಹರಣೆ ಇದೆ. ಇದೇ ನಮ್ಮ ಅಧಿಕಾರದಲ್ಲಿ ಮಾಡಿರತಕ್ಕಂತ ರೈಲ್ ನಲ್ಲಿಯೇ ನಾಳೆ ಅವರು ಪ್ರಯಾಣ ಮಾಡಲಿದ್ದಾರೆ. ಈ ಮಹತ್ವದ ಯೋಜನೆಯನ್ನು ಕೂಡ ನಾವೇ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ಇಲ್ಲಿನ ಪುಡಾರಿ ರಾಜಕಾರಣಿಗಳು ಇದ್ದಾರೆ. ಆದರೆ ನಿಜಾಂಶ ಅದು ಅಲ್ಲ, ಅಂದಿನ ಕಾಂಗ್ರೆಸ್ ಸರ್ಕಾರ ಹಾಗೂ ನಮ್ಮ ಸಿದ್ದರಾಮಯ್ಯ ಸರ್ಕಾರದ ಸಹಕಾರದಿಂದ ಗದಗ-ವಾಡಿ ರೈಲ್ವೆ ಆರಂಭವಾಗಿದ್ದು, ಇದು ಇಲ್ಲಿನ ರಾಜಕೀಯ ವ್ಯಕ್ತಿಗಳಿಗೆ ಇದು ನೆನಪಿರಲಿ ಎಂದು ಪರೋಕ್ಷವಾಗಿ ಮಾಜಿ ಶಾಸಕರಿಗೆ ಹಾಲಿ ಶಾಸಕ ಬಸವರಾಜ ರಾಯರೆಡ್ಡಿ ಟಾಂಗ ನೀಡಿದರು.