JOB ALERT : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ : 3,815 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ..!

You are currently viewing JOB ALERT : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ : 3,815 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ..!
POLICE

ಪ್ರಜಾ ವೀಕ್ಷಣೆ ಸುದ್ದಿಜಾಲ:-

PV ನ್ಯೂಸ್ ಡೆಸ್ಕ್ : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ರಾಜ್ಯ ಸರ್ಕಾರ ನೀಡಿದ್ದು, ರಾಜ್ಯದಲ್ಲಿ ಖಾಲಿ ಇರುವಂತ 3,815 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ…👇

BIG BREAKING : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ದೊಡ್ಡ ಸಂಕಷ್ಟ..!

ಈ ಬಗ್ಗೆ ವಿಧಾನಪರಿಷತ್ತಿನಲ್ಲಿ ಶಾಸಕ ಶಶೀಲ್ ಜಿ ನಮೋಶಿ ಅವರು ಗೃಹ ಇಲಾಖೆಯಲ್ಲಿನ ಯಾವ ಯಾವ ಹುದ್ದೆಗಳ ಮತ್ತು ಎಷ್ಟು ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ ಎಂದು ಪ್ರಶ್ನೆ ಮಾಡಿದರು. ಇವರ ಪ್ರಶ್ನೆಗ ಗೃಹ ಸಚಿವ ಡಾ.ಜಿ ಪರಮೇಶ್ವರ್ ಉತ್ತರಿಸಿದ್ದು, ‘2023-24 ಮತ್ತು 2024-25ನೇ ಸಾಲಿನಲ್ಲಿ ಡಿವೈಎಸ್ಪಿ ಸಿವಿಲ್ 10 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿ ಇರುತ್ತದೆ. 2021-22ನೇ ಸಾಲಿನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಸಿವಿಲ್ 4000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

2023-24ನೇ ಸಾಲಿನಲ್ಲಿ ಎಪಿಸಿ ಸಿಎಆರ್, ಡಿಎಆರ್ 2000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ. 2023-24ನೇ ಸಾಲಿನ ಸ್ಪೆ.ಆರ್ ಪಿಸಿ ಕೆ ಎಸ್ ಆರ್ ಪಿ 1500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ. 2022-23ನೇ ಸಾಲಿನ 300 ಪಿಎಸ್ಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಎಂದರು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ…👇

IPL 2025 : RCB ನಾಯಕನಾಗಿ ಕೆಎಲ್ ರಾಹುಲ್..! 

2023-24ನೇ ಸಾಲಿನ 300 ಪಿಎಸ್ಐ, 2024-25ನೇ ಸಾಲಿನ 15 ಪಿಎಸ್ಐ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ಇದರ ಜೊತೆಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಅಧೀಕ್ಷಕರುಗಳ ಹುದ್ದೆ, 197 ವೀಕ್ಷಕರ ಹುದ್ದೆ ಹಾಗೂ 22 ದ್ವಿತೀಯ ದರ್ಜೆ ಬೋಧಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮೋದನೆಯನ್ನು ನೀಡಲಾಗಿರುತ್ತದೆ ಎಂದು ಉತ್ತರ ನೀಡಿದ್ದಾರೆ.

Leave a Reply

error: Content is protected !!