BREAKING : ತುಂಬಿದ ತುಂಗಭದ್ರಾ ಆಣೆಕಟ್ಟು : ಆಗಸ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಾಗೀನ ಅರ್ಪಣೆ.

You are currently viewing BREAKING : ತುಂಬಿದ ತುಂಗಭದ್ರಾ ಆಣೆಕಟ್ಟು : ಆಗಸ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಾಗೀನ ಅರ್ಪಣೆ.

PV ನ್ಯೂಸ್ ಡೆಸ್ಕ್
ಕೊಪ್ಪಳ : ಬರುವ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ ನಿಗದಿಯಾಗಿದ್ದು, ಆಗಸ್ಟ್ 6 ರಂದು ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ಒದಗಿಸಿದೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ…👇

 JOB ALERT : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ : 3,815 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ..! 

ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ತುಂಗಭದ್ರಾ ನದಿಯಿಂದ ನೀರು ಬಿಡಲಾಗುತ್ತಿದೆ. ಎಲ್ಲ ಗೇಟುಗಳು ವಿದ್ಯುತ್ ಅಲಂಕೃತ ದಿಂದ ಸಂಜೆ ಹೊತ್ತಲ್ಲಿ ನೋಡುಗರನ್ನು ಕಂಗೊಳಿಸುತ್ತಿವೆ. ಹೀಗಾಗಿ ಆಗಸ್ಟ್ 6 ರಂದು ರಾಜ್ಯ ಮುಖ್ಯಮಂತ್ರಿ, ಸಚಿವರು ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.

-:ಪ್ರಜಾ ವೀಕ್ಷಣೆ ಸುದ್ದಿಜಾಲ:-

Leave a Reply

error: Content is protected !!