ಹೊಸಪೇಟೆ (ವಿಜಯನಗರ) : ಸಂಗೀತ ಕಲಿಯಲು ಹೋಗುತ್ತೇನೆಂದು ಹೊರ ಹೋದ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಮಹಿಳೆ ಅಕ್ಕಮ್ಮ ಕೆ. (24) ಅವರು ಜೂನ್ 20 ರಂದು ಕಾಣೆಯಾದ ಬಗ್ಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ(ಗುನ್ನೆ ನಂ:58/2024 ಕಲಂ ಅಡಿ) ಪ್ರಕರಣ ದಾಖಲಾಗಿದೆ.
ಚಹರೆ: ಕಾಣೆಯಾದ ಅಕ್ಕಮ್ಮ ಕೆ. ಅವರು 142 ಅಡಿ ಎತ್ತರ, ಕಪ್ಪು ತಲೆ ಕೂದಲು, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗೈ ಮೇಲೆ ಪರಶ ಎಂದು ಕನ್ನಡದಲ್ಲಿ ಅಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ಪಿಂಕ್ ಕಲರ್ ಸೀರೆ, ಗೋಲ್ಡ್ ಕಲರ್ ಕುಪ್ಪಸವನ್ನು ಧರಿಸಿರುತ್ತಾರೆ. ಈ ಯುವತಿಯ ಬಗ್ಗೆ ಮಾಹಿತಿ ಕಂಡುಬAದಲ್ಲಿ ಕಮಲಾಪುರ ಪಿ.ಎಸ್ ದೂ: 08394-241240 ಗೆ ಕರೆ ಮಾಡಿ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಕಮಲಾಪುರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.