ಕುಕನೂರು : ”ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ ಹಾಗೂ ಕೆಟ್ಟ ಸ್ಪರ್ಶ ಮಾಡುವ ವ್ಯಕ್ತಿ ಯಾರೇ ಆಗಿರಲಿ ಅದನ್ನು ಹೆಣ್ಣು ಮಕ್ಕಳು ವಿರೋಧಿಸಿ, ಅಂತವರಿಂದ ದೂರವಿರಬೇಕು ಎಂದು ಕುಕನೂರು ಠಾಣಾ ಪಿಎಸ್‌ಐ ಗುರುರಾಜ್ ಟಿ. “POCSO ಕಾಯ್ದೆ ಹಾಗೂ ಕಾನೂನು ಜಾಗೃತಿ” ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿದರು.
ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲು ಎಲ್ಲ ಶಾಲೆಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದಿಂದ “ತೆರೆದ ಮನೆ’ ಕಾರ್ಯಕ್ರಮ ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ಶಾಲೆಗಳಿಗೆ ಸೂಚನೆ ನೀಡಿತ್ತು. ಅದರಂತೆ ಇಂದು ಕುಕನೂರು ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಶಾಲೆಯ 18 ವರ್ಷದೊಳಗಿನ ಮಕ್ಕಳಿಗೆ “POCSO ಕಾಯ್ದೆ” ಮತ್ತು ಕಾನೂನು ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ವೇಳೆಯಲ್ಲಿ ಮಾತನಾಡಿದ ಪಿಎಸ್ಐ ಗುರುರಾಜ್, ‘ಪೊಲೀಸ್ ಠಾಣೆಯ ಕಾರ್ಯವೈಖರಿ, ಸಾಮಾನ್ಯವಾಗಿ ಎಲ್ಲರಿಗೂ ಕಾನೂನಿನ ಅರಿವು ಬಹಳ ಮುಖ್ಯ ಹಾಗಾಗಿ ಕಾನೂನಿನ ಸಣ್ಣ ಸಣ್ಣ ವಿಷಯಗಳು ಸಹ ನಿಮಗೂ ತಿಳಿದಿರಬೇಕು ಹಾಗೂ ಅಪರಾಧ ಕಾನೂನುಗಳ ಬಗ್ಗೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ ಬಗ್ಗೆ ಮಕ್ಕಳಲ್ಲಿ ಜಗೃತಿ ಇರುವುದು ಬಹಳ ಮುಖ್ಯವಾದದ್ದು’ ಎಂದು ಹೇಳದರು.
“ನಮ್ಮ ಕರ್ತವ್ಯದ ಜೊತೆಗೆ ಶಾಲಾ ಮಕ್ಕಳಿಗೆ ಸಾಮಾನ್ಯ ಕಾನೂನಿನ ಹಾಗೂ “POCSO ಕಾಯ್ದೆ”ಯ ಬಗ್ಗೆ ಪೊಲೀಸರ ಕಾರ್ಯವೈಖರಿ ಅವರ ಕರ್ತವ್ಯದ ಕುರಿತು ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ಈ ಕಾರ್ಯಕ್ರಮ ಮಾಡುತ್ತೇವೆ, ಇದರಿಂದ ಮಕ್ಕಳಲ್ಲಿ ಕಾನೂನಿನ ಜ್ಞಾನ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ.”