ಇಂದು ನಡೆದ ಟೀಮ್ ಇಂಡಿಯಾ ಹಾಗೂ ನೇಪಾಳ ತಂಡದ ನಡುವಿನ ಏಷ್ಯಾಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೋಲಿಂಗ್ ಆಯ್ಕೆ ಮಾಡಿಕೊಂಡು ನೇಪಾಳ ತಂಡವನ್ನು 48.2 ಓವರ್ ನಲ್ಲಿ 230 ರನ್ ಗೆ ಕಟ್ಟಿಹಾಕಿ ಆಲ್ಔಟ್ ಮಾಡಿತು. ಈ ಗುರಿಯನ್ನು ಬೆನ್ನು ಹತ್ತಿದ ಭಾರತದ ತಂಡಕ್ಕೆ ಮೊದಲಿಗೆ ಮಳೆರಾಯನ ಕಾಟ ಎದುರಾಯಿತು.
ನಂತರದಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ 50 ಓವರಿನ ಪಂದ್ಯವೂ 23ರ ಓವರ್ ಗೆ 145 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಈ ಟಾರ್ಗೆಟ್ ಬೆನ್ನು ಒತ್ತಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟ ಇಲ್ಲದೇ 20.1 ಓವರ್ ನಲ್ಲಿ 147 ರನ್ ಬಾರಿಸಿ ಗೆಲುವಿನತ್ತ ಮುಖಮಾಡಿತು.
BIG BREAKING : ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಮಹಿಳಾ ಶಿಕ್ಷಕಿಯರು..!!
BREAKING : ಮಾಳೆಕೊಪ್ಪ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ 100ಕ್ಕೂ ಹೆಚ್ಚು ಕುರಿಗಳು..!!
ನಾಯಕ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಅವರ ಅದ್ಭುತ ಆಟದಿಂದ ಟೀಮ್ ಇಂಡಿಯಾ ಜಯದ ಪತಾಕೆ ಹಾರಿಸಿದೆ. ನಾಯಕ ರೋಹಿತ್ ಶರ್ಮ 59 ಬಾಲ್ಸ್ ಗೆ 74 ರನ್ ಹಾಗೆ ಅವರ ಬ್ಯಾಟ್ ನಿಂದ 6 ಪೋರ್,5ಸಿಕ್ಸ್ ಬಂದಿವೆ. ಗಿಲ್ 62 ಬಾಲ್ಸ್ ಗೆ 67 ರನ್ ಬಾರಿಸಿದ್ದಾರೆ. ಅವರ ಬ್ಯಾಟ್ನಿಂದ 8 ಪೋರ್ ಹಾಗೂ ಒಂದು ಸಿಕ್ಸ್ ಬಂದಿದೆ.