LOCAL NEWS : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ..!

You are currently viewing LOCAL NEWS : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ..!

ಕುಕನೂರು : ಕುಕನೂರು ಪಟ್ಟಣ ಪಂಚಾಯತ್‌ನಿಂದ ಪರಿಶಿಷ್ಟ ಜಾತಿ ಜನಾಂಗದ ಎಂ.ಬಿ.ಬಿ.ಎಸ್/ ಬಿ.ಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

LOCAL EXPRESS : ಸೆ.08 ರಂದು ಯಲಬುರ್ಗಾ ಪಟ್ಟಣದಲ್ಲಿ ಸರ್ಕಾರ ವಿರುದ್ದ ಪ್ರತಿಭಟನೆ ಮಾಜಿ ಸಚಿವ ಹಾಲಪ್ಪ ಆಚಾರ್

2021-22ನೇ ಸಾಲಿನ ಎಸ್.ಎಫ್.ಸಿ. ಅನುದಾನದಲ್ಲಿ ಶೇ.24.10% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ಎಂ.ಬಿ.ಬಿ.ಎಸ್/ ಬಿ.ಇ ವ್ಯಾಸಂಗ್ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿತ್ತು. ಇನ್ನು ಎರಡು ಲ್ಯಾಪ್‌ಟಾಪ್ ಲಭ್ಯವಿದ್ದು, ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

LOCAL EXPRESS : ಅಸಹಾಯಕ ಶಾಸಕ ರಾಯರೆಡ್ಡಿ : ಮಾಜಿ ಸಚಿವ ಹಾಲಪ್ಪ ವ್ಯಂಗ್ಯ.!!

  • ಅರ್ಜಿದಾರರು ಈ ಹಿಂದೆ ಈ ಸಹಾಯಧನದ ಸೌಲಭ್ಯಗಳನ್ನು ಯಾವುದೇ ಇಲಾಖೆಯಿಂದಲೂ ಪಡೆದಿರಬಾರದು.
  • ಅರ್ಜಿದಾರರು ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯ ಖಾಯಂ ನಿವಾಸಿಯಾಗಿರಬೇಕು.

SPECIAL POST : ಸಮಸ್ತ ನಾಡಿನ ಜನತೆಗೆ “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಶುಭಾಶಯಗಳು

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯದಿನವಾಗಿದ್ದು, ಚಾಲ್ತಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ 2 ಭಾವಚಿತ್ರ, ಈ ಸೌಲಭ್ಯವನ್ನು ಯಾವುದೇ ಇಲಾಖೆಯಿಂದ ಪಡೆಯದೇ ಇರುವ ಕುರಿತು ಬಾಂಡನೋಂದಿಗೆ ಪ.ಪಂ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪೂರ್ಣ ದಾಖಲಾತಿ ಇರದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು ಎಂದು ಕುಕನೂರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SPECIAL POST : ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಜನುಮದಿನದ ಶುಭಾಶಯ

Leave a Reply

error: Content is protected !!