ಕೊಪ್ಪಳ : ಕೊಪ್ಪಳ ಬೇವಿನಳ್ಳಿ ಗ್ರಾಮದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಯೂ ರಾಷ್ಟ್ರೀಯ ಸುರಕ್ಷತಾ ಮಂಡಳಿಯು ನೀಡುವ ಪ್ರತಿಷ್ಠಿತ ಪುರಸ್ಕಾರವಾದ “ಉನ್ನತ ಸುರಕ್ಷಾ ಪುರಸ್ಕಾರ” ಪ್ರಶಸ್ತಿಗೆ ಭಾಜನವಾಗಿದೆ.
BIG BREAKING : ಕುಕನೂರು ಪಟ್ಟಣದ ಹೊರವಲಯದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆ..!!
ಇಂದು (ಸೆಪ್ಟೆಂಬರ್-9) ಬೆಂಗಳೂರಿನ ರ‍್ಯಾಡಿಸನ್ ಬ್ಲೂ ಏಟ್ರಿಯ ಹೋಟೆಲ್‌ನಲ್ಲಿ ನಡೆದ ಪ್ರಶಸಿ ಫ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸತ್ಯಸಾಯಿಬಾಬಾ ವಿಶ್ವವಿದ್ಯಾಲಯದ ಕುಲಪತಿ ಕಂಠಮೂರ್ತಿ, ಕಾರ್ಖಾನೆಗಳು ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಜಂಟೀ ನಿರ್ದೇಶಕ ನವನೀತ್ ಮೋಹನ್ ಮತ್ತು ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಕರ್ನಾಟಕ ಚಾಪ್ಟರ್‌ನ ಕಾರ್ಯದರ್ಶಿ ಪಿ. ಸಿ. ವೆಂಕಟೇಶ್ವರಲು ಇವರ ಸಮ್ಮುಖದಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯ ಫೌಂಡ್ರಿ ಘಟಕದ ಪ್ರಧಾನ ವ್ಯವಸ್ಥಾಪಕ ಹೆಚ್.ಎಮ್ ಜಗದೀಶ್, ಸುರಕ್ಷತಾ ವಿಭಾಗದ ಅಧಿಕಾರಿ ಎಮ್.ಎಮ್ ನಾಡಿಗೇರ್ ಮತ್ತು ಗುರುರಾಜ್ ಕೆ ಇವರಿಗೆ “ಉನ್ನತ ಸುರಕ್ಷಾ ಪುರಸ್ಕಾರ ಪ್ರಶಸ್ತಿ” ಪ್ರದಾನ ಮಾಡಿದರು.
ಅದೇ ರೀತಿ ಚಿತ್ರದುರ್ಗಾ ಜಿಲ್ಲೆಯ ಹಿರಿಯೂರು ಪರಮೇನಹಳ್ಳಿಯಲ್ಲಿ ಇರುವ ಕಿರ್ಲೋಸ್ಕರ್ ಕಾರ್ಖಾನೆಯ ಬೀಡು ಕಬ್ಬಿಣ ಘಟಕಕ್ಕೂ ಸಹ ಈ ಬಾರಿ “ಉನ್ನತ ಸುರಕ್ಷಾ ಪುರಸ್ಕಾರ” ಪ್ರಶಸ್ತಿ ಬಂದಿದೆ. ಕಾರ್ಖಾನೆಯ ಬೀಡು ಕಬ್ಬಿಣ ಘಟಕದ ಪ್ರಧಾನ ವ್ಯವಸ್ಥಾಪಕ ಶ್ಯಾಮ್ ಸುಂದರ್ ರೆಡ್ಡಿ, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಮಹೇಶ್ ಭೋಸ್ಲೆ ಹಾಗೂ ಸುರಕ್ಷತಾ ವಿಭಾಗದ ಅಧಿಕಾರಿ ಅರಿಹಂತ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
LOCAL NEWS : ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಭೇಟಿ!
ಕಂಪನಿಯ ಕಾರ್ಯಾಚರಣೆ, ಕಾರ್ಖಾನೆಯ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆ, ಸುರಕ್ಷತಾ ತರಬೇತಿಗಳು, ಅಣಕು ಪ್ರದರ್ಶನ, ಅಪಘಾತಗಳ ಅಂಕಿ-ಅಂಶ, ಸುರಕ್ಷತಾ ಸಾಧನ-ಸಾಮಾಗ್ರಿಗಳ ಧರಿಸುವಿಕೆ, ಉತ್ಪಾದನ ಚಟುವಟಿಕೆಗಳಲ್ಲಿ ಅಪಘಾತಗಳು ಸಂಭವಿಸದಂತೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ಇತ್ಯಾದಿಗಳನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಸುರಕ್ಷತಾ ಮಂಡಳಿಯವರು ಕಿರ್ಲೋಸ್ಕರ್ ಕಾರ್ಖಾನೆಯ ಈ ಸಾಧನೆಯನ್ನು ಗಮನಿಸಿ 2021-2022 ನೇ ಸಾಲಿನ “ಉನ್ನತ ಸುರಕ್ಷಾ ಪುರಸ್ಕಾರ” ಪ್ರಶಸ್ತಿ ಪ್ರಧಾನ ಮಾಡಿರುತ್ತಾರೆ.
BIG NEWS : ಅವಳಿ ತಾಲೂಕಿಗೆ 5 ಪ್ರೌಢಶಾಲೆ, 3 ಪದವಿಪೂರ್ವ ಕಾಲೇಜು ಮಂಜೂರು : ಶಾಸಕ ರಾಯರೆಡ್ಡಿ
ಈ ಸಮಾರಂಭದಲ್ಲಿ ಕರ್ನಾಟಕದ ವಿವಿಧ ಕಾರ್ಖಾನೆಗಳ ಹಿರಿಯ ಅಧಿಕಾರಿಗಳು, ಮುಖ್ಯಸ್ಥರು ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.
“ಕಾರ್ಖಾನೆಯಲ್ಲಿನ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮದ ಪ್ರತಿಫಲದಿಂದಾಗಿ ಈ ಪ್ರಶಸ್ತಿಯು ಸಂದಿದೆ. ಆದಾಗ್ಯೂ ಸಹ, ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸಿ “ಶೂನ್ಯ ಅಪಘಾತ ಗುರಿ”ಯನ್ನು ಸಾಧಿಸಬೇಕು”
ಪಿ. ನಾರಾಯಣ
ಉಪಾಧ್ಯಕ್ಷ, ಕಾರ್ಖಾನೆಯ ವ್ಯವಸ್ಥಾಪಕರು &
ಮಾನವ ಸಂಪನ್ಮೂಲ ವಿಭಾಗದ ಕಾರ್ಯನಿರ್ವಾಹಕ.