SPECIAL STORY : ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರವನ್ನ ಕಡೆಗಣಿಸಿದ ಅಬಕಾರಿ ಅಧಿಕಾರಿಗಳು..!!

You are currently viewing SPECIAL  STORY : ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರವನ್ನ ಕಡೆಗಣಿಸಿದ ಅಬಕಾರಿ ಅಧಿಕಾರಿಗಳು..!!

ವಿಶೇಷ ವರದಿ : ಚಂದ್ರು ಆರ್‌.ಬಿ. (9538631636)

ಕುಕನೂರು : ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಬಸವರಾಜ ರಾಯರೆಡ್ಡಿ ಅವರು ಇತ್ತಿಚೆಗೆ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ರಾಜಕೀಯ ವಲಯದಲ್ಲೂ ಹಾಗೂ ಸ್ವತಃ ತಮ್ಮ ಯಲಬುರ್ಗಾ ವಿಧಾನಸಭೆ ಕ್ಷೇತ್ರದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು, ಜೊತೆಗೆ ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಪ್ರಚಾರ ಕೂಡ ಆಗಿತ್ತು.

ಮದ್ಯದ ಅಂಗಡಿಯನ್ನು ಗ್ರಾಮಸ್ಥರು ವಿರೋಧಿಸುತ್ತಿರುವುದು

 

SPECIAL STORY : ಮಾನವೀಯತೆ ಮೆರೆದ “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪುರಸ್ಕೃತೆ ಶಿಕ್ಷಕಿ ಗಿರಿಜಾ ಧರ್ಮಸಾಗರ..!! 

ಹಿರಿಯ ಶಾಸಕರು ಹಾಗೂ ಮಾಜಿ ಸಂಸದರು, ಮಾಜಿ ಸಚಿವರು ಆಗಿದ್ದ ರಾಯರೆಡ್ಡಿ, ಈ ರೀತಿ ಸಿಎಂಗೆ ಪತ್ರ ಬರೆದಿದ್ದು ಯಾಕೆ ಎಂಬುವುದರ ಬಗ್ಗೆ ಜನರಲ್ಲಿ ಪ್ರಶ್ನೆ ಮೂಡಿದೆ.

ಇಲ್ಲಿದೆ ಒಂದು ಜಿವಂತ ನಿದರ್ಶನ. ಅದನೇಂದರೆ, ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮದ್ಯದ ಅಂಗಡಿ ಆರಂಭಿಸಲು  ಎಂಎಸ್‌ಐಎಲ್‌ (MSIL-Government Liquor shop)  ಮದ್ಯದ ಪರವಾನಿಗೆ ಹೊಂದಿರುವ ಗಂಗಾವತಿ ತಾಲೂಕಿನ ವ್ಯಕ್ತಿ ಒಬ್ಬರು ಈ ಹಿಂದೆ ಈ ಗ್ರಾಮದಲ್ಲಿ ಮದ್ಯ ಅಂಗಡಿಯನ್ನು ಆರಂಭಿಸಿದ್ದರು. ಈ ಮದ್ಯದ ಅಂಗಡಿಗೆ ಅಲ್ಲಿನ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು, ಇದರಿಂದ ಎತ್ತೆಚ್ಚುಕೊಂಡು ಕೊಪ್ಪಳ ಅಬಕಾರಿ ಇಲಾಖೆ ಅಧಿಕಾರಿಗಳು ಈ ಅಂಗಡಿಯನ್ನು ಸ್ಥಗತಗೊಳಿಸಿದ್ದರು.

BIG NEWS : ರೈತರಿಗೆ ಸಿಹಿ ಸುದ್ದಿ : 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ:- ಸಿಎಂ ಘೋಷಣೆ..!

ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರ

 

ಇದೀಗ ಮತ್ತೆ ಈ ಗ್ರಾಮದಲ್ಲಿ ಅದೇ ಸ್ಥಳದಲ್ಲಿ ಮದ್ಯದ ಅಂಗಡಿ ಆರಂಭವಾಗಿದ್ದು, ಈ ಕುರಿತು ಶಾಸಕ ಬಸವರಾಜ ರಾಯರೆಡ್ಡಿ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಸಕ ರಾಯರೆಡ್ಡಿ ಅವರು ಕೊಪ್ಪಳ ಅಬಕಾರಿ ಇಲಾಖೆ ಅಧಿಕಾರಿಗೆ ಪತ್ರ ಬರೆದು ಇದನ್ನು ಕೂಡಲೇ ಪರವಾನಿಗೆ ವಾಪಾಸ್‌ ಪಡೆದುಕೊಳ್ಳಬೇಕು ಮತ್ತು ಈ ಮದ್ಯದ ಅಂಗಡಿಯಿಂದ ಗ್ರಾಮಸ್ಥರಿಗೆ ತೊಂದರೆ ಆಗಲಿದೆ ಎಂದು ತಮ್ಮ ಮೂಲಕ ಪತ್ರ ಬರೆದಿದ್ದರು.

ಆದರೆ, ಶಾಸಕರ ಈ ಪತ್ರಕ್ಕೆ ಯಾವುದೇ ಬೆಲೆ ಕೊಡದ ಅಬಕಾರಿ ಅಧಿಕಾರಿಗಳು ಮತ್ತೆ ಮದ್ಯದ ಅಂಗಡಿಗೆ ಪರವಾನಿಗೆ ನೀಡಿದ್ದಾರೆ. ಅದಕ್ಕೆ ಇರಬಹುದು ಶಾಸಕರು ಸಿಎಂಗೆ ಪತ್ರ ಬರೆದು ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ತಪ್ಪಾಗಿರುವುದು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಹಾಗೂ ಸರ್ಕಾರದ ಅಧೀನದಲ್ಲಿ ಎಂಎಸ್‌ಐಎಲ್‌ ಮದ್ಯದ ಅಂಗಡಿ ಹಾಗಾಗಿ ಅಧಿಕಾರಿಗಳು ಮದ್ಯದ ಅಂಗಡಿಗೆ ಪರವಾನಿಗೆ ನೀಡಿರಬಹುದು ಎಂದು ಅಲ್ಲಿನ ಜನರ ಅಭಿಪ್ರಾಯವಾಗಿದೆ.

KOPPAL NEWS : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ಗೆ ರಾಷ್ಟ್ರೀಯ ಸುರಕ್ಷತಾ ಮಂಡಳಿಯ “ಉನ್ನತ ಸುರಕ್ಷಾ ಪುರಸ್ಕಾರ” ಪ್ರಶಸ್ತಿ.!!

ಎಂಎಸ್‌ಐಎಲ್‌ ಮದ್ಯದ ಅಂಗಡಿಗೆ ತೀವ್ರ ವಿರೋಧ

ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ರಸಗೊಬ್ಬರ ಸಂಗ್ರಹಕ್ಕೆಂದು ನಿರ್ಮಿಸಿದ ಈ ಮಳಿಗೆಯಲ್ಲಿ ಮಧ್ಯ ಮಾರಾಟ ಮಾಡಲು ಮುಂದಾಗಿದ್ದಾರೆ. ಈಗಾಗಲೆ ಅನೇಕ ಬಾರಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಸಂಘಟನೆಗಳಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇಧಿಕೆ ವತಿಯಿಂದ ಅನೇಕ ಬಾರಿ ಹೋರಾಟ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು, ಸ್ವಲ್ಪ ದಿವಸ ನಿಲ್ಲಿಸಿ ,ಇದೀಗ ಪುನಃ ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.


“ಈ ಗ್ರಾಮದಲ್ಲಿ ಅಶಾಂತಿ ಉಂಟಾಗಿ ಗಲಾಟೆ ಆದರೆ ಅದಕ್ಕೆ ನೇರ ಹೊಣೆಯನ್ನ ಅಬಕಾರಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಯಲಬುರ್ಗಾ-ಕುಕನೂರ ತಾಲೂಕ ಅಬಕಾರಿ ನಿರೀಕ್ಷಕರೆ ಹೊಣೆ”
ಶರಣಪ್ಪ ಕಾಳಿ
ಗ್ರಾಮಸ್ಥ, ಕುದರಿಮೋತಿ

 

Leave a Reply

error: Content is protected !!