ಕೋಲಾರ : ಕಳೆದ ಸೆಪ್ಟೆಂಬರ್ 25 ರಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹಾಗೂ ಬಿಜೆಪಿ ಸಂಸದ ಮುನಿಸ್ವಾಮಿ “ಜನತಾ ದರ್ಶನ” ಕಾರ್ಯಕ್ರಮದ ವೇದಿಕೆಯ ಮೇಲೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಜಗಳವಾಡಿಕೊಂಡಿದ್ದರು.
BREAKING : ಪ್ರತಿಭಟನೆ ಮಾಡಿದ ಕರವೇ ಯುವ ಸೈನ್ಯ : “ಕರ್ನಾಟಕ ಬಂದ್”ಗೆ ಬೆಂಬಲ ಇಲ್ಲ”..!!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ವಿರುದ್ಧ ಇದೀಗ ಪರಸ್ಪರ ದೂರು ದಾಖಲಾಗಿದೆ. ಬಂಗಾರಪೇಟೆ ಶಾಸಕ ಎಸ್ ಏನ್ ನಾರಾಯಣಸ್ವಾಮಿಯವರ ವಿರುದ್ಧ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
BREAKING : ಕಾಂಗ್ರೆಸ್ ಶಾಸಕನಿಗೆ ಬಿಗ್ ಶಾಕ್..!! : ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹ..!!
ಅದು ಅಲ್ಲದೆ ಇತ್ತಕಡೆ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಕೂಡ FIR ದಾಖಲಾಗಿದ್ದು, ಶಾಸಕ ನಾರಾಯಣಸ್ವಾಮಿಯ ದೂರಿನ ಮೇರೆಗೆ ಸಂಸದರ ಮೇಲೆ ಕೋಲಾರ ನಗರದ ಗರ್ಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ಇದೆ.
BREAKING : ಕರ್ನಾಟಕ ಬಂದ್ ಎಫೆಕ್ಟ್ : ಮುಖ್ಯಮಂತ್ರಿ ಸಿದ್ದು ನಿವಾಸದ ಬಳಿ ಹೈ ಅಲರ್ಟ್..!
ಇದೀಗ ಉಭಯ ನಾಯಕರ ಜಟಾಪಟಿಯು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ವಿರುದ್ಧ ಸಂಸದ ಮುನಿಸ್ವಾಮಿ ಭೂ ಕಬಳಿಕೆ ಗಂಭೀರ ಆರೋಪ ಮಾಡಿದರು. ಈ ವೇಳೆ ಶಾಸಕ ಸಂಸದರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎಂದು ತಿಳಿದು ಬಂದಿದೆ.