ಬೆಂಗಳೂರು : ಈ ವರ್ಷದ (2023-24) ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ.
LOCAL EXPRESS : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಕನೂರಿನ ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು.!!
LOCAL EXPRESS : ಜೀ ಕನ್ನಡ ಸ್ಟಾರ್ ಗಳಿಂದ ಅದ್ದೂರಿ ಸಂಗೀತ ಸಂಜೆ ಕಾರ್ಯಕ್ರಮ
ಅರ್ಜಿ ಸಲ್ಲಿಸಲು ರಾಜ್ಯದ ಆಯಾ ತಾಲ್ಲೂಕು ಕೇಂದ್ರದ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2.50 ಲಕ್ಷ), ವಿದ್ಯಾರ್ಥಿಯ ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ (ಕಡ್ಡಾಯವಾಗಿ ಆಧಾರ್ ಸೀಡಿಂಗ್ ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿರತಕ್ಕದ್ದು), ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಹಿಂದಿನ ವರ್ಷದ ಅಂಕ ಪಟ್ಟಿ ಪ್ರತಿ, ಇತ್ತೀಚಿನ ಭಾವಚಿತ್ರ, ಅಧ್ಯಯನ/ಬೋನಾಪೈಡ್ ಪ್ರಮಾಣ ಪತ್ರ (ಮೆಟ್ರಿಕ್ ನಂತರದ ಕೋರ್ಸ್‍ಗಳಿಗೆ), ಶುಲ್ಕ ರಶೀದಿ(ಮೆಟ್ರಿಕ್ ನಂತರದ ಕೋರ್ಸ್‍ಗಳಿಗೆ), ತಂದೆ, ತಾಯಿ, ಪೋಷಕರ ಆಧಾರ್ ಪ್ರತಿ ದಾಖಲಾತಿಗಳೊಂದಿಗೆ ssp.postmatric.karnataka.gov.in ವೆಬ್‍ಸೈಟ್‍ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅವರು ತಿಳಿಸಿದ್ದಾರೆ.