ಕುಕನೂರು : ನಿನ್ನೆ ಕೊಪ್ಪಳದಲ್ಲಿ ನಡೆದ “ಜಿಲ್ಲಾ ಮಟ್ಟ ಪ್ರೌಢಶಾಲೆಗಳ ಕ್ರೀಡಾಕೂಟ”ದಲ್ಲಿ ಕುಕನೂರು ತಾಲೂಕಿನ ಕಕ್ಕಿಹಳ್ಳಿ ತಾಂಡಾದ (ಲಂಬಾಣಿ) ನಿವಾಸಿ ವಿದ್ಯಾರ್ಥಿಗಳಾದ ಶಶಿಕುಮಾರ ಕಾರಭಾರಿ, (10 ನೇ ತರಗತಿ ವಿದ್ಯಾರ್ಥಿ), ಅನ್ನಪೂರ್ಣೇಶ್ವರಿ ರಾಟಿಮನಿ (10ನೇ ತರಗತಿ ವಿದ್ಯಾರ್ಥಿನಿ), ಶೈಲಾ ಮನ್ನಾಪೂರ (8ನೇ ತರಗತಿ ವಿದ್ಯಾರ್ಥಿನಿ) ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರೌಢಶಾಲಾ ವಿಭಾಗ ಶಿಕ್ಷಣ ಇಲಾಖೆಯ ಇವರ ಸಂಯುಕ್ತ ಆಶ್ರಯಲ್ಲಿ “ಜಿಲ್ಲಾ ಮಟ್ಟ ಪ್ರೌಢಶಾಲೆಗಳ ಕ್ರೀಡಾಕೂಟ” ನಡೆಯಿತು.
ಈ ಕ್ರೀಡಾಕೂಟದಲ್ಲಿ ನಿನ್ನೆ ವೈಯಕ್ತಿಕ ಕ್ರೀಡೆಗಳು ನಡೆದಿದ್ದು, ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಈ ಮಕ್ಕಳು ಮತ್ತರ ಸಾಧನೆ ಗೈದಿದ್ದಾರೆ. ಗುಂಡು, ಚಕ್ರ, ಸರಪಳಿ ಗುಂಡು ಎಸೆತಗಳಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಶಶಿಕುಮಾರ ಕಾರಭಾರಿ, (10 ನೇ ತರಗತಿ ವಿದ್ಯಾರ್ಥಿ) ಗುಂಡು ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಅನ್ನಪೂರ್ಣಿಶ್ವರಿ ರಾಟಿಮನಿ (10ನೇ ತರಗತಿ ವಿದ್ಯಾರ್ಥಿನಿ) ಸರಪಳಿ ಗುಂಡು ಎಸೆತದಲ್ಲಿ ಪ್ರಥಮ, ಶೈಲಾ ಮನ್ನಾಪೂರ (8ನೇ ತರಗತಿ ವಿದ್ಯಾರ್ಥಿನಿ) ಗುಂಡು ಹಾಗೂ ಚಕ್ರ ಎಸೆತ ದ್ವೀತಿಯ ಸ್ಥಾನ, ಸ್ಥಾನ ಪಡೆದ್ದಾರೆ. ಈ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಈ ಮೂಲಕ ತಾಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ, ಜೊತೆಗೆ ಬಂಜಾರ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.
ಇದೇ ಸಂದರ್ಭದಲ್ಲಿ ಗವಿಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯೋಪಾದ್ಯಯ ಎಸ್ ಜೆ ಪಾಟೀಲ್, ದೈಹಿಕ ಶಿಕ್ಷಕ ರಾಜ್‌ಕುಮಾರ್ ರಾಠೋಡ್ ಹಾಗೂ ಶಾಲೆಯ ಸಿಬ್ಬಂದಿ ಹರ್ಷ ವ್ಯಕ್ತಪಡೆಸಿದ್ದಾರೆ.
“ನಮ್ಮ ಊರಿನ ಈ ಮಕ್ಕಳು ತಮ್ಮ ನಿರಂತರ ಕಠಿಣ ಪರಿಶ್ರಮದಿಂದ ಇಂದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವುದು ನಮಗೆ ಅತೀವ ಸಂತೋಷ ತಂದಿದೆ. ಅದರ ಜೊತೆಗೆ ಅವರ ತಂದೆ ತಾಯಂದಿರಿಗೆ ಹಾಗೂ ಊರಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ”