ಬೆಂಗಳೂರು : ಕನ್ನಡ ಚಲನಚಿತ್ರದ ಮೇರು, ಹಿರಿಯ ನಟಿ ಲೀಲಾವತಿ (85)ಅವರು ನಿನ್ನೆ ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ಈ ನೆಲೆಯಲ್ಲಿ ಅವರ ಪುತ್ರ ನಟ ವಿನೋದ್ ರಾಜ್ ಅವರ ಸೂಚನೆಯಂತೆ ಅವರು ವಾಸವಿದ್ದ ಬೆಂಗಳೂರಿನ ಸೋಲದೇವನ ಹಳ್ಳಿಯಲ್ಲಿರುವ ತೋಟದ ಮನೆಯ ಗೇಟ್ ಮುಂಭಾಗದಲ್ಲಿ ಅಂತ್ಯಕ್ರಿಯೆ ಅಂತಿಮ ವಿಧವಿಧಾನಗಳು ನಡೆಯಲಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BREAKING : ಹಿರಿಯ ನಟಿ ಲೀಲಾವತಿ ವಿಧಿವಶ..!!
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : 10 ಕೋಟಿ ದಂಡ, 12 ವರ್ಷ ಜೈಲು..!!
ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಈಗಾಗಲೇ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಳೆದ 30 ವರ್ಷಗಳಿಂದ ತೋಟದ ಮನೆಯಲ್ಲಿ ನಟಿ ಲೀಲಾವತಿಯವರು ನೆಲೆಸಿದ್ದರು ಎನ್ನಲಾಗುತ್ತಿದೆ. ಅಂತ್ಯಕ್ರಿಯೆಗೆ ತೋಟದ ಮನೆಯ ಗೇಟ್ ಮುಂಭಾಗ ಸ್ಥಳ ಗುರುತುಪಡಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಲೀಲಾವತಿಯವರ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯ ಸ್ಥಳದಲ್ಲಿ ಬ್ಯಾರಿಕೆಡ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಬರುವ ಗಣ್ಯರಿಗೆ ಪೊಲೀಸರಿಂದ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BREAKING : ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತರ ದಾಳಿ : ಗಂಗಾವತಿಯಲ್ಲಿ ಇಂಜಿನಿಯರ್ ಗೆ ಶಾಕ್!!
ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಕೆ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಇದೆ. ಇದೀಗ ಲೀಲಾವತಿಯವರ ಪಾರ್ಥಿವ ಶರೀರ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇರಿಸಲಾಗಿದ್ದು, ಬೆಳಗ್ಗೆ 10:30ಕ್ಕೆ ಅವರ ಪಾರ್ಥಿವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಏರ್ಪಡಿಸಲಾಗಿದ್ದು, ಅಲ್ಲಿ ಸಿಎಂ ಸಿದ್ದರಾಮಯ್ಯ ಆಗಮಿಸಿ ಲೀಲಾವತಿಯವರ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.