BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!

You are currently viewing BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!
ರೋಡ್‌ ಬ್ರೇಕರ್ ನಿರ್ಮಾಣ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

ವರದಿ : ಚಂದ್ರು ಆರ್ ಭಾನಾಪೂರ್

ಕುಕನೂರ : ಕಳೆದ ಡಿಸೆಂಬರ್ 16 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಒಂದು ನಡೆದಿತ್ತು, ಈ ಪರಿಣಾಮ ಬೈಕ್ ಸವಾರ ನಿರುಪಾದಿ ಎನ್ನುವ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದನು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉  BIG NEWS : “ಇಂದಿರಾ ಕ್ಯಾಂಟೀನ್” : ನೂತನ ಊಟ-ಉಪಹಾರದ ಚಾಟ್‌ ಇಲ್ಲಿದೆ..! 

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BIG NEWS : ಕೊವಿಡ್ -19 ವೈರಾಣು : ರಾಜ್ಯದ ಜನರಲ್ಲಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ..!

ಕುಕನೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರುಗಡೆ ಈ ಘಟನೆ ನಡೆದಿತ್ತು. ಈ ಕುರಿತು ಸಂಪೂರ್ಣವಾಗಿ “ಪ್ರಜಾ ವೀಕ್ಷಣೆ” ತಂಡ ವರದಿ ಮಾಡಿತ್ತು. ಕೆ.ಎಸ್.ಆರ್.ಟಿ.ಸಿ ಡಿಪೋ ಹಾಗೂ ತಾಲೂಕ ಆಡಳಿತ ತಹಶೀಲ್ದಾರ್ ಕಾರ್ಯಾಲಯ, ಹೀಗೆ ಪ್ರಮುಖ ಕಚೇರಿಗಳು ಈ ಭಾಗದಲ್ಲಿ ಇವೆ. ಆದ್ದರಿಂದ ಹೆಚ್ಚಾಗಿ ವಾಹನಗಳು ಹಾಗೂ ಜನಸಂದಣಿ ಇರುವ ಪ್ರದೇಶ ಇದಾಗಿದೆ.

“ಪ್ರಜಾ ವೀಕ್ಷಣೆ” ವರದಿಗೆ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು

ರಸ್ತೆಯ ಹಳೆಯ ಚಿತ್ರ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

 

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 GOOD NEWS : ಯಲಬುರ್ಗಾ ಹಾಗು ಕುಕನೂರು ತಾಲೂಕಿನ ಜನತೆಗೆ ಶಾಸಕ ರಾಯರಡ್ಡಿ ಸಿಹಿ ಸುದ್ದಿ..!

ಕುಕನೂರು-ಗುದ್ನೆಪ್ಪನಮಠ ಮುಖ್ಯರಸ್ತೆ ಯಾಗಿರುವ ಇದು, ಮುಖ್ಯವಾಗಿ ಬಸ್ ಡಿಪೋ ಹಾಗೂ ತಹಶೀಲ್ದಾರ್ ಕಾರ್ಯಾಲಯಕ್ಕೆ ಹೋಗುವ ಮಾರ್ಗ ಒಂದೇ ಆಗಿರುವುದರಿಂದ, ಈ ಮುಖ್ಯ ರಸ್ತೆಯಲ್ಲಿ ಯಾವುದೇ ಸ್ಪೀಡ್ ಲಿಮಿಟ್, ರೋಡ್ ಬ್ರೇಕರ್, ಸಿಗ್ನಲ್ ಲೈಟ್‌ ಇಲ್ಲದಿರುವುದನ್ನ ಗಮನಿಸಿ. LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?”ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯೊಂದನ್ನು “ಪ್ರಜಾ ವೀಕ್ಷಣೆ-ಡಿಜಿಟಲ್ ಸುದ್ದಿ ಮಾಧ್ಯಮ”ದಲ್ಲಿ ಪ್ರಕಟಣೆ ಮಾಡಲಾಗಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಕೇವಲ 5 ದಿನಗಳ ಅಂತರದಲ್ಲಿಯೇ ರೋಡ್ ಬ್ರೇಕರ್ ನಿರ್ಮಾಣ ಹಾಗೂ ಡಿಪೋ ಎದುರುಗಡೆ ಗಿಡಗಂಟೆಗಳನ್ನ ಸ್ವಚ್ಛಗೊಳಿಸಿದ್ದಾರೆ. ಇನ್ನೂ ಸ್ಪೀಡ್ ಲಿಮಿಟ್ ಹಾಗೂ ಸಿಗ್ನಲ್ ಲೈಟ್ ಅಳವಡಿಸಬೇಕಾಗಿದೆ.

ರೋಡ್‌ ಬ್ರೇಕರ್ ನಿರ್ಮಾಣ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

 

ಇದೇ ಡಿಸೆಂಬರ್ 26ರಂದು (ಮಂಗಳವಾರ ದಿನ) ಜಿಲ್ಲೆಯ ಪ್ರಸಿದ್ದ ಗುದ್ನೆಶ್ವರನ ಪಂಚಕಳಸ ಮಹಾ ರಥೋತ್ಸವ ಜರಗುವುದರಿಂದ ಸಾವಿರಾರು ಭಕ್ತಾದಿಗಳು ಇದೇ ರಸ್ತೆಯ ಮಾರ್ಗವಾಗಿ ಜಾತ್ರೆಗೆ ಬರಲಿದ್ದಾರೆ. ಹಾಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತವೂ ಸುಗಮ ರಸ್ತೆ ಸಂಚಾರ, ಟ್ರಾಫಿಕ್ ರೂಲ್ಸ್ ಗಳನ್ನ ಅಳವಡಿಸಿ ಅಮಾಯಕ ಜೀವಗಳನ್ನ ಉಳಿಸಬೇಕಾಗಿದೆ ಎಂಬ ಆಶಯ ಸಾರ್ವಜಿನಕರ ಹಾಗೂ ನಮ್ಮ ಮಾಧ್ಯಮದ ಸದುದ್ದೇಶವಾಗಿದೆ.

Leave a Reply

error: Content is protected !!