LOCAL NEWS : ಜ.6 ರಂದು ಕೊಪ್ಪಳ ಬಂದ್ ..!

You are currently viewing LOCAL NEWS : ಜ.6 ರಂದು ಕೊಪ್ಪಳ ಬಂದ್ ..!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಜ.6 ರಂದು ಕೊಪ್ಪಳ ಬಂದ್ ..!

ಸಂವಿಧಾನ ಸಂರಕ್ಷಣಾ ಸಮಿತಿ ಕೊಪ್ಪಳ, ವಿವಿಧ ಸಂಘಟನೆಗಳ ಮುಂದಾಳತ್ವದಲ್ಲಿ.

ಕುಕನೂರು : ಸಂವಿಧಾನ ಸಂರಕ್ಷಣಾ ಸಮಿತಿ ಕೊಪ್ಪಳ ಹಾಗೂ ವಿವಿಧ ಸಂಘಟನೆಗಳ ಮುಂದಾಳತ್ವದಲ್ಲಿ ಜ.೬ ರಂದು ಕೊಪ್ಪಳ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು  ಆರ್.ಪಿ ರಾಜೂರು ಹೇಳಿದರು.

LOCAL BREAKING : ಅಹೋರಾತ್ರಿ ಧರಣಿ ಕುಳಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು…!! 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೇ ಡಿ.೧೭ ರಲ್ಲಿ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮೀತ್ ಷಾ ಸಂವಿಧಾನ ಶಿಲ್ಪಿಯಾದ ಅಂಬೇಡ್ಕರ್‌ಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಸಂಘಟನೆಗಳು ಸೇರಿಕೊಂಡು ಸಂವಿಧಾನ ಸಂರಕ್ಷಣಾ ಸಮಿತಿಯ ಮುಂದಾಳತ್ವದಲ್ಲಿ ಅಮೀತ್ ಷಾರನ್ನು ಗಡಿ ಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳವಾಗಿದೆ ಎಂದು ತಿಳಿಸಿದರು.

ಮುಖಂಡರಾದ ಈಶಪ್ಪ ದೊಡ್ಡಮನಿ ಮಾತನಾಡಿ ಕೊಪ್ಪಳ ಪಟ್ಟಣದಲ್ಲಿ ಎಲ್ಲಾ ಅಂಗಡಿಕಾರರು, ವ್ಯಾಪಾರಸ್ಥರಿಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ತಿಳಿಸಿಲಾಗಿದೆ. ಅದರಂತೆ ಎಲ್ಲಾ ವ್ಯಾಪಾರಸ್ಥರು ಹಾಗೂ ಆಟೋ ಚಾಲಕರು ಹಾಗೂ ವಿವಿಧ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದರು.

BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!! 

ನಿAಗಪ್ಪ ಬೆಣಕಲ್ ಮಾತನಾಡಿ ಪ್ರತಿಭಟನೆಯಲ್ಲಿ ಬೈಕ್ ರ‍್ಯಾಲಿ, ಆಟೋ ರ‍್ಯಾಲಿ ಹಾಗೂ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ರ‍್ಯಾಲಿ ನೆಡೆಯಲಿದೆ, ಸಾರ್ವಜನಿಕರು ಈ ಪ್ರತಿಭಟನಾ ರ‍್ಯಾಲಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗೆದಗೆಪ್ಪಜ್ಜ ಇಟಗಿ, ಭೀಮಣ್ಣ ನಡುವಲಮನಿ, ರಾಘವೇಂದ್ರ ಕಾತರಕಿ, ನಿಂಗಪ್ಪ ಗೊರ್ಲೇಕೊಪ್ಪ, ಮಂಜುನಾಥ ಕಿಂಡಿಮನಿ, ಪ್ರಶಾಂತ ಆರಬೇರಳಿನ, ಶ್ರೀಧರ ಭಂಡಾರಿ, ಮುತ್ತು ಗುಬ್ಬಿ, ಈರಪ್ಪ ಹಿರೇಮನಿ, ಹನಮಂತಪ್ಪ ಮುತ್ತಾಳ ಹಾಗೂ ಇತರರಿದ್ದರು.

Leave a Reply

error: Content is protected !!