BREAKING : ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯ..! : ಮುಂಡರಗಿ ಪಟ್ಟಣ ಬಂದ್..!
ಮುಂಡರಗಿ : ಕೇಂದ್ರ ಸಚಿವ ಅಮಿತ್ ಶಾ ಅವರನ್ನ ವಜಾಗೊಳಿಸುವಂತೆ ಆಗ್ರಹಿಸಿ ಬಿ. ಆರ್. ಅಂಬೇಡ್ಕರ ಅಭಿಮಾನಿ ಬಳಗವೂ ಮುಂಡರಗಿ ಪಟ್ಟಣ ಬಂದ್ ಗೆ ಕರೆ ನೀಡಿದ್ದಾರೆ.
ಈ ಬಂದ್ ಕನ್ನಡಪರ, ಕಾರ್ಮಿಕ. ಸಂಘಟನೆಗಳ ಒಕ್ಕೂಟದಿಂದ ಬೆಂಬಲ ದೊರಕಿದೆ. ಬೆಳ್ಳಗ್ಗೆಯಿಂದಲೂ ಸಂಚಾರ ವಿರಳ, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೆಂಬಲ ನೀಡಿದರು.
ಇದರ ಜೊತೆಗೆ ಬಸ್ ಸಂಚಾರ ಕ್ರಮೇಣ ಸ್ಥಗಿತಗೊಂಡಿದ್ದು, ಕೆಲ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು, ವಾಹನ ಸಂಚಾರ ವಿರಳವಾಗಿದ್ದು, ಕಂಡುಬಂದಿದೆ.
ಬೆಳಗ್ಗೆ 11 ಗಂಟೆಗೆ ಹೋರಾಟ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ರ್ಯಾಲಿ ಬಂದು ತಹಶೀಲ್ದಾರ್ ಮನವಿಗೆ ಮನವಿ ಸಲ್ಲಿಸಲಾಯಿತು.
ವರದಿ : ವಿರೇಶ್ ಗುಗ್ಗರಿ