Post Views: 136
SHOCKING : ಐಸ್ ಕ್ರೀಮ್ ಪ್ರೀಯರಿಗೆ ಶಾಕ್..! : ಸತ್ತ ಹಾವು ಪತ್ತೆ..!

ವೈರಲ್ ನ್ಯೂಸ್ : ಇತ್ತೀಚಗೆ ಆಹಾರ ಸುರಕ್ಷತಾ ಅಧಿಕಾರಿಗಳ ಮಾಹಿತಿ ಪ್ರಕಾರ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗುತ್ತಿದ್ದು, ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗಿಲ್ಲ ಎಂದು ಬಹಿರಂಗವಾದ ವರದಿ ಬಂದಿದೆ. ಇದೀಗ ಜನರು ಹೊರಗಿನ ಆಹಾರ ಸೇವಿಸಲು ಹಿಂಜರಿಯುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ…
https://x.com/inquirerdotnet/status/1897523647545307468
ಬಹುತೇಕ ಸಂದರ್ಭಗಳಲ್ಲಿ, ಆಹಾರ ಪದಾರ್ಥಗಳಲ್ಲಿ ಜಿರಳೆಗಳು, ಹುಳುಗಳು, ಸತ್ತ ಕಪ್ಪೆಗಳು ಮತ್ತು ಇತರ ಜೀವಿಗಳು ಕಂಡುಬರುವ ಸಹಜವಾಗಿಬಿಟ್ಟಿದೆ. ಇಲ್ಲೋಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಥೈಲ್ಯಾಂಡ್‌ನ ಮುವಾಂಗ್ ರಚ್ಚಾಬುರಿ ಪ್ರದೇಶದ ಯುವಕ ರೆಬನ್ ನಕ್ಲ್ಯಾಂಗ್‌ಬೂನ್, ರಸ್ತೆ ಬದಿಯ ಬಂಡಿಯಿಂದ ಐಸ್ ಕ್ರೀಮ್ ಖರೀದಿಸಿದನು. ತಾವು ಖರದಿಸಿದ ಐಸ್ ಕ್ರೀಂನನ್ನು ತಿನ್ನುವ ಸಂದರ್ಭದಲ್ಲಿ ಸತ್ತ ಹಾವು ನೋಡಿ ಶಾಕ್ ಅಗಿದ್ದಾನೆ. ಇದು ಈಗ ಭಾರೀ ವೈರಲ್ ಆಗಿದೆ.