ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈ ಸಿ ಮಾಡಿಸಿಕೊಳ್ಳಲು ಕೊನೆ ದಿನಾಂಕ ನಿಗದಿಯಾಗಿಲ್ಲ.
ಕೊಪ್ಪಳ: ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈಸಿ ಮಾಡಿಸಿಕೊಳ್ಳಲು ಕೊನೆ ದಿನಾಂಕ ಇದೆ ಎಂಬುದು ಸುಳ್ಳು ವದಂತಿಯಾಗಿದೆ, ಅಲ್ಲದೆ ಅದಕ್ಕೆ ಯಾವುದೇ ರೀತಿಯ ಹಣ ನೀಡುವ ಅವಶ್ಯಕತೆಯೂ ಇಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರಗಳ ವ್ಯವಹಾರ ಇಲಾಖೆ ಕೊಪ್ಪಳ ತಿಳಿಸಿದೆ.
ಸಾರ್ವಜನಿಕರು ತಮ್ಮ ಗ್ಯಾಸ್ ಏಜೆನ್ಸಿಗಳಲ್ಲಿ ಈ ಕೆವೈಸಿ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಆದರೆ ಕೆಲವರು ಇದೇ ತಿಂಗಳು 30 ನೇ ತಾರೀಕು ಕೊನೆಯ ದಿನಾಂಕವಾಗಿದ್ದು ಅಷ್ಟರೊಳಗಾಗಿ ಇ ಕೆವೈ ಸಿ ಮಾಡಿಸಿಕೊಳ್ಳದಿದ್ದರೆ ಸಬ್ಸಿಡಿ ಹಣ ಹಾಗೂ ಗ್ಯಾಸ್ ಸರಬರಾಜು ವ್ಯಥೆಯ ಆಗಲಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರು ಸಾಲಗಟ್ಟಿ ನಿಂತಿದ್ದಾರೆ. ಇದನ್ನು ಮನಗಂಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರಗಳ ವ್ಯವಹಾರ ಇಲಾಖೆ ಗ್ಯಾಸ್ ಏಜೆನ್ಸಿ ಗಳಲ್ಲಿ ಏಕೆ ವೈಸಿ ಮಾಡಿಸಿಕೊಳ್ಳಲು ಯಾವುದೇ ಕೊನೆಯ ದಿನಾಂಕ ನಿಗದಿಯಾಗಿರುವುದಿಲ್ಲ, ಅಲ್ಲದೆ ಇ ಕೆವೈ ಸಿ ಮಾಡಲು ಯಾವುದೇ ರೀತಿಯ ಹಣ ನೀಡುವ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ಸಾರ್ವಜನಿಕರು ಈ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. (more…)