ರಸ್ತೆ ಅಪಘಾತ, ಓರ್ವ ಸಾವು.!
ಕುಕನೂರು : ಪಟ್ಟಣದ ಕೊಪ್ಪಳ ರಸ್ತೆಯ ಹೊರ ವಲಯದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಪಟ್ಟಣದ ಶ್ರೀ ಕಾಂತ ಛಲವಾದಿ ಎಂಬುವರು ಸಾವನೊಪ್ಪಿರುವ ಘಟನೆ ನಡೆದಿದೆ.
ಕೊಪ್ಪಳ ರಸ್ತೆಯ ಶೆಟ್ಟರ ಕಲ್ಯಾಣ ಮಂಟಪದ ಹತ್ತಿರ ಅಪಘಾತ ಸಂಭವಿಸಿದ್ದು, ಬೈಕ್ ಚಾಲನೆ ಮಾಡುವಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಆದ ನೆಲಕ್ಕೆ ಬಿದ್ದಾಗ ವಾಹನ ಒಂದು ಆತನ ಮೇಲೆ ಹಾದು ಹೋಗಿರ ಬಹುದು ಎನ್ನಲಾಗಿದೆ. ಚಿಕಿತ್ಸೆಗಾಗಿ ತೆರಳುವಾಗ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕುಕನೂರ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಇನ್ನಷ್ಟು ಕಾರಣಗಳು ತಿಳಿದು ಬರಬೇಕಿದೆ.