ದೆಹಲಿ : ದೆಹಲಿಯಲ್ಲಿರುವ ಸುಪ್ರಸಿದ್ದ ಕೆಂಪುಕೋಟೆಯಲ್ಲಿ ’77ನೇ ಸ್ವಾತಂತ್ರ್ಯ ದಿನಾಚರಣೆ’ಗಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಸತತ 10ನೇ ಬಾರಿಗೆ ಕೆಂಪು ಕೋಟೆಯ ಬೃಹತ್ ವೇದಿಕೆಯಿಂದ ಭಾಷಣ ಮಾಡಲಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಆರಾಮ್ನೆ ಸ್ವಾಗತಿಸಲಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ (2023) ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ ಸುಮಾರು 1800 ಮಂದಿಯನ್ನು ತಮ್ಮ ಸಂಗಾತಿ ಜತೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.