2023ರ IPLನಲ್ಲಿ ಇಂದು ಎರಡನೇಯ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ್ದು, ಮುಂಬೈ ನಿಗದಿತ ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ 172 ರನ್ ಗುರಿ ನೀಡಿದೆ. ಮುಂಬೈ ಪರ ತೀಲಕ್ 84 ನೇಹಾಲ್ 21 ರನ್ ಗಳಿಸಿದರು. ಆರ್‌ಸಿಬಿ ಪರ ಕರಣ್ 2, ಸಿರಾಜ್,ದೀಪ್ & ಟೋಪ್ಲಿ , ಬ್ರೆಸ್ವೇಲ್, ಪಟೇಲ್ ತಲಾ 1 ವಿಕೆಟ್ ಪಡೆದಿದ್ದಾರೆ. ಇದೀಗ ಆರ್‌ಸಿಬಿ ಉತ್ತಮ ಆರಂಭ ಪಡೆದಿದ್ದು, ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ವಿರಾಟ್ ಕೊಹ್ಲಿ ಬರ್ಜರಿ ಆಟ ಆಡುತ್ತಿದ್ದಾರೆ. ಸದ್ಯದ ಸ್ಕೋರ್ ಆರ್‌ಸಿಬಿ ಯಾವುದೇ ವಿಕೆಟ್ ಇಲ್ಲದೇ 108 ರನ್ ಗಳಿಸಿದೆ. ಫಾಫ್ ಡು ಪ್ಲೆಸಿಸ್ 59* ಹಾಗೂ ವಿರಾಟ್ ಕೊಹ್ಲಿ 45* ರನ್ ಬಾರಿಸಿ ಕ್ರಿಸ್‌ನಲ್ಲಿದ್ದಾರೆ. ಆರ್‌ಸಿಬಿ ಗೆಲುವಿಗೆ ಇನ್ನು 54 ಬಾಲ್ಸ್‌ಗೆ 64 ರನ್‌ಬೇಕಾಗಿದೆ.