ಹೊಸಪೇಟೆ (ವಿಜಯನಗರ) : ಮರಿಯಮ್ಮನಹಳ್ಳಿಯ ಹೊರ ವಲಯದ ಕೂಡ್ಲಿಗಿ ಕಡೆಯಿಂದ ಹೊಸಪೇಟೆಗೆ ಹೋಗುವ ಎನ್.ಹೆಚ್.50ರ ರಸ್ತೆಯಲ್ಲಿ ಕೆಂಪು ಬಣ್ಣದ ಅವೆಂಜರ್ ಮೋಟರ್ ಸೈಕಲ್‌ನ ವಾಹನ ಚಾಲಕ ಅಪಘಾತಮಾಡಿ ಪರಾರಿಯದ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಗುನ್ನೆ ನಂ: 201/2023, ಕಲಂ: 279, 304(ಎ), ಐಪಿಸಿ ಮತ್ತು ಕಲಂ: 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 04-12-2023ರಂದು ಸಂಜೆ ಸುಮಾರು 4:30ರ ಸಮಯಕ್ಕೆ ಹಂಪಿನಕಟ್ಟೆಯ ಟಿ.ಹುಲುಗಪ್ಪ ಅವರು ಮರಿಯಮ್ಮನಹಳ್ಳಿಯ ಹೊರ ವಲಯದ ಕೂಡ್ಲಿಗಿ ಕಡೆಯಿಂದ ಹೊಸಪೇಟೆಗೆ ಹೋಗುವ ಎನ್.ಹೆಚ್.50ರ ರಸ್ತೆಯನ್ನು ಕ್ರಾಸ್ ಮಾಡಿಕೊಂಡು ಕೆ.ಇ.ಬಿ ಕಡೆಗೆ ಇರುವ ಸರ್ವಿಸ್ ರಸ್ತೆಗೆ ಹೋಗುವಾಗ ಕೆಂಪು ಬಣ್ಣದ ಅವೆಂಜರ್ ಮೋಟರ್ ಸೈಕಲ್ (ಕೆ.ಎ.03/ಹೆಚ್.ಎಲ್.1270)ನ ವಾಹನ ಚಾಲಕ ಅತೀ ವೇಗವಾಗಿ ಬಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಇದರ ಪರಿಣಾಮವಾಗಿ ಟಿ.ಹುಲುಗಪ್ಪ ತೀವ್ರಗಾಯಗೊಂಡಿರುತ್ತಾರೆ. ಅವರನ್ನು ಚಿಕಿತ್ಸೆಗೆಂದು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ.
ಅಪಘಾತ ಮಾಡಿದ ವ್ಯಕ್ತಿಯು ಸ್ಥಳದಲ್ಲೇ ಮೋಟಾರ್ ಸೈಕಲ್ ಬಿಟ್ಟು ಪರಾರಿಯಾಗಿರುತ್ತಾನೆ. ಕಾರಣ ಈ ವ್ಯಕ್ತಿಯು ಯಾರಿಗಾದರು ಕಂಡುಬAದಲ್ಲಿ ಮೊ.ನಂ: 08397-238477, 9480805735ಗೆ ಸಂಪರ್ಕಿಸಿ ಎಂದು ಹಗರಿಬೊಮ್ಮನಹಳ್ಳಿಯ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.